ಮುಂಬೈನ್‌ನ ಲೇಡಿ ಡಿಸೈನರ್ ಹಾಗೂ ಆಕೆಯ ತಂದೆಯ ವಿರುದ್ಧ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತಾ ಫಡ್ನವಿಸ್ ಅವರ ದೂರಿನ ಮೇರೆಗೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಡಿಸೈನರ್ ಅನಿಷ್ಕಾ ಮತ್ತು ಅವರ ತಂದೆ ತನಗೆ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ. ಜೊತೆಗೆ 1 ಕೋಟಿ ರೂಪಾಯಿ ಲಂಚ ನೀಡಲು ಪ್ರಯತ್ನಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.
2021ರಲ್ಲಿ ಅಮೃತಾಳನ್ನು ಮೊದಲ ಬಾರಿಗೆ ನವೆಂಬರ್ ಅನಿಷ್ಕಾ ಭೇಟಿಯಾಗಿದ್ದರು. ಇದೇ ಫೆಬ್ರವರಿ 18 ಮತ್ತು 19 ರಂದು ಆಕೆ ಕೆಲ ವಿಡಿಯೋ ತುಣುಕುಗಳು, ಧ್ವನಿ ಟಿಪ್ಪಣಿಗಳು ಮತ್ತು ಸಂದೇಶಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಮೃತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅಮೃತಾ ಅವರ ದೂರಿನ ಮೇರೆಗೆ ಮಲಬಾರ್ ಹಿಲ್ ಪೊಲೀಸರು ಐಪಿಸಿ ಸೆಕ್ಷನ್ 120 (ಬಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 8 ಮತ್ತು 12 ರ ಅಡಿಯಲ್ಲಿ ಪುಕರಣ ದಾಖಲಿಸಿದ್ದಾರೆ. ಆರೋಪಿ ಮಹಿಳೆ ಕಳೆದ 16 ತಿಂಗಳಿಂದ ತನ್ನೊಂದಿಗೆ ಸಂಪರ್ಕದಲ್ಲಿದ್ದು, ಪ್ರಕರಣವೊಂದರಲ್ಲಿ ಸಹಾಯ ಮಾಡುವ ಬಗ್ಗೆ ಪದೇ ಪದೇ ಕರೆ ಮಾಡುತ್ತಿದ್ದಳು ಎಂದು ಅವರು ಆರೋಪ ಮಾಡಿದ್ದಾರೆ.
ಈ ಎಲ್ಲಾ ವಿಷಯಗಳನ್ನು ಅಮೃತಾ ಫಡ್ನವಿಸ್ ಪೊಲೀಸರಿಗೆ ತಿಳಿಸಿ. ಇದರೊಂದಿಗೆ ಚಾಟ್‌ಗಳ ವಿವರಗಳನ್ನ ಕೊಟ್ಟಿದ್ದಾರೆ. ಇವುಗಳ ಆಧಾರದ ಮೇಲೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಪೊಲೀಸರು ಡಿಸೈನರ್ ಅನ್ನು ವಿಚಾರಣೆಗೆ ಕರೆಯಬಹುದು ಎಂದು ಹೇಳಲಾಗುತ್ತಿದೆ.