
ಅಮೃತಸರದ ಫತೇಹಘರದ ಚುರಿಯನ್ ಪ್ರದೇಶದಲ್ಲಿ ಸೋಮವಾರ 12 ನೇ ತರಗತಿಯ ಬಾಲಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಬಾಲಕನನ್ನು ಅಜಯ್ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಅಜಯ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಹೊರ ಹೋಗಿದ್ದಾನೆ.
ತಡರಾತ್ರಿಯಾದರೂ ಮನೆಗೆ ಹಿಂತಿರುಗದಿದ್ದುರಿಂದ ಕುಟುಂಬ ಸದಸ್ಯರು ಆತನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಆತನ ಮೊಬೈಲ್ ಗೆ ಫೋನ್ ಮಾಡಿದರಾದರೂ ಅದು ಸ್ವಿಚ್ ಆಫ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರಿಗೆ ಮಂಗಳವಾರ ಎಫ್ ಸಿ ಐ ಗೋಡೌನ್ ಬಳಿ ಆತನ ಶವ ಸಿಕ್ಕಿದೆ. ಅವನ ದೇಹದ ಮೇಲೆ ಗುಂಡು ಹಾರಿಸಿರುವ ಗಾಯದ ಗುರುತುಗಳು ಕಂಡು ಬಂದಿವೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.