ಕೊರೋನಾ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆ ಗಳಿಸಿಕೊಂಡ ವಸ್ತುಗಳಲ್ಲಿ ಅಮೃತಬಳ್ಳಿಯೂ ಒಂದು. ಬಹುತೇಕರಿಗೆ ಇದರ ಬಳಕೆ ಹೇಗೆಂಬುದೇ ತಿಳಿದಿಲ್ಲ.
ಅಮೃತಬಳ್ಳಿ ಕೇವಲ ಶೀತ, ಜ್ವರ ದೂರ ಮಾಡುವುದು ಮಾತ್ರವಲ್ಲ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ.
ಇದರ ಕಷಾಯವನ್ನು ತಯಾರಿಸುವಾಗ ಕಡ್ಡಿಯ ಸಿಪ್ಪೆ ತೆಗೆಯಿರಿ. ಬಳಿಕ ಜಜ್ಜಿ ನೀರಿನೊಂದಿಗೆ ಬೆರೆಸಿ ಕುದಿಸಿ. ಸೋಸುವ ಮುನ್ನ ಹಾಲು ಹಾಗೂ ಜಜ್ಜಿದ ಶುಂಠಿ ಬೆರೆಸಿ. ಬಳಿಕ ಕುಡಿಯಿರಿ. ಸಿಹಿ ಬೇಕು ಎನ್ನುವವರು ತುಸು ಜೇನು ಸೇರಿಸಿ ಕುಡಿಯಿರಿ.
ಇದರ ಕಷಾಯ ತಯಾರಿಸುವ ಇನ್ನೊಂದು ವಿಧಾನವೆಂದರೆ ಅಮೃತಬಳ್ಳಿ ಕಡ್ಡಿ, 1 ತುಂಡು ಚಕ್ಕೆ, ನಾಲ್ಕಾರು ಕಾಳು ಮೆಣಸು, ಏಲಕ್ಕಿ, ಲವಂಗ ಸೇರಿಸಿ. ಸಣ್ಣ ಉರಿಯಲ್ಲಿಟ್ಟು ಐದು ನಿಮಿಷ ಕುದಿಸಿ. ತುಳಸಿ ಎಲೆ ಸೇರಿಸಿ. ಬಳಿಕ ಸೋಸಿ ನಿಂಬೆರಸ ಬೆರೆಸಿ ಕುಡಿಯಿರಿ.