ವಾತಾವರಣ ಬದಲಾದಂತೆ ಅನೇಕ ಸಂಗತಿಗಳಲ್ಲಿ ಬದಲಾವಣೆಯಾಗುತ್ತದೆ. ಋತು ಬದಲಾದಂತೆ ನೆಗಡಿ, ಜ್ವರ, ಕೆಮ್ಮು, ಗಂಟಲು ನೋವು ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಹಾಗಾಗಿ ಋತು ಬದಲಾಗ್ತಿದ್ದಂತೆ ಜೀವನಶೈಲಿ ಹಾಗೂ ನಮ್ಮ ಆಹಾರದಲ್ಲಿ ಕೂಡ ನಾವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಚಳಿಗಾಲ ಶುರುವಾಗಿದ್ದು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡಲು ಶುರುವಾಗಿವೆ.
ಕ್ಯಾರೆಟ್ : ಅತ್ಯುತ್ತಮ ತರಕಾರಿ ಪಟ್ಟಿಯಲ್ಲಿ ಕ್ಯಾರೆಟ್ ಮೊದಲ ಸ್ಥಾನದಲ್ಲಿದೆ. ಕ್ಯಾರೆಟ್ ನಲ್ಲಿರುವ ಲಾಭಕರ ಗುಣವನ್ನು ಲೆಕ್ಕ ಹಾಕುತ್ತ ಹೋದ್ರೆ ಸುಸ್ತಾಗುತ್ತದೆ. ಸಾಂಕ್ರಾಮಿಕ ರೋಗವಿರಲಿ, ಕಣ್ಣು ಕೆಂಪಾಗುವುದಿರಲಿ, ಕಣ್ಣಿನಲ್ಲಿ ನೀರು ಬರುವುದಿರಲಿ ಎಲ್ಲ ಸಮಸ್ಯೆಗೂ ಕ್ಯಾರೆಟ್ ಮದ್ದು. ಹಾಗಾಗಿ ಋತು ಬದಲಾಗುವ ವೇಳೆ ಕ್ಯಾರೆಟ್ ಅವಶ್ಯವಾಗಿ ತಿನ್ನಿ.
ಕಾರ್ಬೋಹೈಡ್ರೇಟ್ : ಕಾರ್ಬೋಹೈಡ್ರೇಟ್ ಆಹಾರ ಸೇವನೆ ಮಾಡಿದ ನಂತ್ರ ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಅದು ರಕ್ತದಲ್ಲಿರುವ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಮೆದುಳಿನ ಆರೋಗ್ಯಕ್ಕೂ ಇದು ಒಳ್ಳೆಯದು. ಇದ್ರಿಂದ ಒತ್ತಡ, ಕೀಳರಿಮೆ ಕಡಿಮೆಯಾಗುತ್ತದೆ. ಮೊಟ್ಟೆಯ ಬಿಳಿ ಭಾಗ, ಟೋಮೋಟೋ, ಅಕ್ಕಿ, ಗೋಧಿ, ಸೇಬುವಿನಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿರುವುದ್ರಿಂದ ಇವುಗಳನ್ನು ಹೆಚ್ಚಾಗಿ ಸೇವನೆ ಮಾಡಿ.
ಹಣ್ಣು-ತರಕಾರಿ : ಹಣ್ಣು ತರಕಾರಿ ಪ್ರತಿಯೊಂದು ಋತುವಿಗೂ ಒಳ್ಳೆಯದು. ಋತು ಬದಲಾಗುವ ವೇಳೆ ತರಕಾರಿ, ಹಣ್ಣು ಸೇವನೆ ಮಾಡುವುದ್ರಿಂದ ಮತ್ತಷ್ಟು ಲಾಭವಿದೆ. ಕ್ಯಾರೆಟ್, ಮೂಲಂಗಿ, ಟೋಮೋಟೋ ತರಕಾರಿಯನ್ನು ಹೆಚ್ಚಾಗಿ ಉಪಯೋಗಿಸಿ.
ಶುಂಠಿ : ಶುಂಠಿ ಔಷಧಿಯ ಗುಣ ಹೊಂದಿದೆ. ಚಳಿಗಾಲದಲ್ಲಿ ಹಾಗೂ ಋತು ಬದಲಾಗುವ ಸಮಯದಲ್ಲಿ ಇದರ ಬಳಕೆ ಹೆಚ್ಚಿರಬೇಕು. ಗಂಟಲು ನೋವು, ಕೆಮ್ಮಿಗೆ ಇದು ಅತ್ಯುತ್ತಮ ಮದ್ದು. ಟೀ ಜೊತೆ ಅಥವಾ ನೀರಿಗೆ ಶುಂಠಿ, ಜೇನುತುಪ್ಪ ಬೆರೆಸಿ ಕುದಿಸಿ ಕುಡಿಯಬಹುದು.