ಬೆಂಗಳೂರು: ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಾರ್ಷಿಕ ಶೈಕ್ಷಣಿಕ ಸಹಾಯಧನ ಮೊತ್ತ ಪರಿಷ್ಕರಿಸಲಾಗಿದೆ.
ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯಿಂದ 2023 -24 ನೇ ಸಾಲಿನಿಂದ ಅನ್ವಯವಾಗುವಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಪರಿಷ್ಕರಿಸಿದೆ.
ಒಂದರಿಂದ ಐದನೇ ತರಗತಿ ಮಕ್ಕಳಿಗೆ ವಾರ್ಷಿಕ 1,800 ರೂ. ನೀಡಲಾಗುವುದು. ಆರರಿಂದ ಎಂಟನೇ ತರಗತಿ ಮಕ್ಕಳಿಗೆ 2400 ರೂ., 9 ಮತ್ತು 10ನೇ ತರಗತಿ ಮಕ್ಕಳಿಗೆ 3000 ರೂ. ನೀಡಲಾಗುತ್ತದೆ. ಪಿಯುಸಿ ವಿದ್ಯಾರ್ಥಿಗಳಿಗೆ ಮಕ್ಕಳಿಗೆ 4000 ರೂ. ನೀಡಲಾಗುವುದು.
ಪಾಲಿಟೆಕ್ನಿಕ್, ಐಟಿಐ ವಿದ್ಯಾರ್ಥಿಗಳಿಗೆ 4600 ರೂ., ಬಿಎಡ್ ವಿದ್ಯಾರ್ಥಿಗಳಿಗೆ 6000 ರೂ., ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿ, ಬಿಎಸ್ಸಿ ನರ್ಸಿಂಗ್, ಪ್ಯಾರಾ ಮೆಡಿಕಲ್, ಎಂಟೆಕ್, ಎಲ್.ಎಲ್.ಬಿ. ವಿದ್ಯಾರ್ಥಿಗಳಿಗೆ 10,000 ರೂ. ನೀಡಲಾಗುವುದು.
ಎಂಡಿ ಮೆಡಿಕಲ್ 12,000 ರೂ., ಎಂಫಿಲ್, ಐಐಟಿ, ಪಿಹೆಚ್ಡಿ, ಐಐಎಂ ವಿದ್ಯಾರ್ಥಿಗಳಿಗೆ 11000 ರೂ.ಗಳಿಗೆ ಶೈಕ್ಷಣಿಕ ಸಹಾಯಧನ ಪರಿಷ್ಕರಿಸಲಾಗಿದೆ.