ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಪ್ರಮಾಣ ತೀವ್ರ ಆತಂಕಕ್ಕೆ ಎಡೆ ಮಾಡಿದೆ. ಕಳಪೆ ಗುಣಮಟ್ಟದ ಗಾಳಿಯಿಂದಾಗಿ ಆರೋಗ್ಯ ತುರ್ತು ಪರಿಸ್ಥಿತಿಯ ಆತಂಕ ಉಂಟಾಗಿದೆ.
ಈ ನಡುವೆ ನಗರಗಳ ಗಾಳಿಯ ಗುಣಮಟ್ಟ ಹಾಗೂ ಮಾಲಿನ್ಯ ಪ್ರಮಾಣವನ್ನು ಟ್ರ್ಯಾಕ್ ಮಾಡುವ ಸೇವೆ, ಬ್ರಿಟನ್ನ ಪರಿಸರ ಕಾರ್ಯಕ್ರಮದ ಸಹಭಾಗಿತ್ವ ವಹಿಸಿರುವ ಸ್ವಿಡ್ಜರ್ಲೆಂಡ್ ಮೂಲದ ಕ್ಲೈಮೇಟ್ ಗ್ರೂಪ್ ವಿಶ್ವದ 10 ಅತಿ ಮಾಲಿನ್ಯ ನಗರಗಳನ್ನು ಪಟ್ಟಿ ಮಾಡಿದೆ. ಈ ಟಾಪ್ 10 ಅತೀ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಸ್ಥಾನ ಪಡೆದಿವೆ.
ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 556ಕ್ಕೆ ಕುಸಿಯುವ ಮೂಲಕ ಮೊದಲ ಸ್ಥಾನವನ್ನು ಪಡೆದಿದೆ. ಕೋಲ್ಕತ್ತಾ ನಾಲ್ಕನೇ ಸ್ಥಾನ ಹಾಗೂ ಮುಂಬೈ ಆರನೇ ಸ್ಥಾನದಲ್ಲಿದೆ.
ಕಳಪೆ ವಾಯು ಗುಣಮಟ್ಟ ಹೊಂದಿದ ನಗರದ ಪಟ್ಟಿಯಲ್ಲಿ ಪಾಕಿಸ್ತಾನದ ಲಾಹೋರ್ ಹಾಗೂ ಚೀನಾದ ಚೇಂಗ್ಡು ಕೂಡ ಸೇರಿದೆ.
ಕಳಪೆ ವಾಯುಗುಣಮಟ್ಟವನ್ನು ಹೊಂದಿದ ವಿಶ್ವದ ಟಾಪ್ 10 ನಗರಗಳ ಪಟ್ಟಿ :
1.ದೆಹಲಿ, ಭಾರತ(AQI : 556)
2.ಲಾಹೋರ್, ಪಾಕಿಸ್ತಾನ( AQI:354)
3. ಸೋಫಿಯಾ, ಬಲ್ಗೇರಿಯಾ (AQI:178)
4.ಕೋಲ್ಕತ್ತಾ, ಭಾರತ(AQI:177)
5. ಜಾಗ್ರೆಬ್, ಕ್ರೊಯೇಷಿಯಾ (AQI: 173)
6. ಮುಂಬೈ, ಭಾರತ (AQI: 169)
7. ಬೆಲ್‌ಗ್ರೇಡ್, ಸೆರ್ಬಿಯಾ (AQI: 165)
8. ಚೆಂಗ್ಡು, ಚೀನಾ (AQI: 165)
9. ಸ್ಕೋಪ್ಜೆ, ಉತ್ತರ ಮ್ಯಾಸಿಡೋನಿಯಾ (AQI: 164)
10. ಕ್ರಾಕೋವ್, ಪೋಲೆಂಡ್ (AQI: 160)