ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೂಡಿಕೆದಾರರಿಗೆ ಗಳಿಸುವ ಅವಕಾಶವನ್ನು ನೀಡುತ್ತಿದ್ದಾರೆ. ಅಮಿತಾಬ್ ಬಚ್ಚನ್, ಡಿಜಿಟಲ್ ಸಂಗ್ರಹವನ್ನು ಎನ್ಎಫ್ಟಿ ಮೂಲಕ ಹರಾಜು ಹಾಕಿದ್ದಾರೆ. ಇದು ನವೆಂಬರ್ 1 ರಿಂದ ಶುರುವಾಗಿದೆ. ಅಮಿತಾಬ್ ಬಚ್ಚನ್ ತಮ್ಮ ನಾನ್-ಫಂಗಬಲ್ ಟೋಕನ್ಗಳನ್ನು ಪ್ರಾರಂಭಿಸಿದ ತಕ್ಷಣ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ದಾಖಲೆ ಮುರಿದಿದೆ.
ಮೊದಲ ದಿನವೇ 520,000 ಯುಎಸ್ ಡಾಲರ್ ಅಂದ್ರೆ ಸುಮಾರು 3.8 ಕೋಟಿ ರೂಪಾಯಿ ಮೌಲ್ಯದ ಬಿಡ್ಗಳನ್ನು ಸ್ವೀಕರಿಸಲಾಗಿದೆ. ಈ ಸಂಗ್ರಹದ ಬಗ್ಗೆ ಹೂಡಿಕೆದಾರರಲ್ಲಿ ಹೆಚ್ಚಿನ ಉತ್ಸಾಹವಿದೆ. ಎನ್ಎಫ್ಟಿ ಪ್ಲಾಟ್ಫಾರ್ಮ್ ಗಾರ್ಡಿಯನ್ ಲಿಂಕ್ ಪ್ರಕಾರ, ನವೆಂಬರ್ 1 ರಿಂದ 4 ರವರೆಗೆ ಹರಾಜು ನಡೆಯಲಿದೆ.
ಬಚ್ಚನ್ ಅವರ ‘ಮಧುಶಾಲಾ’ 4,20,000 ಡಾಲರ್ ಗೆ ಹರಾಜಾಗಿದೆ. ಈ ಹರಾಜಿನಲ್ಲಿ ಬಚ್ಚನ್ ರ ಅನೇಕ ಹಿಟ್ ಚಿತ್ರಗಳ ಹಸ್ತಾಕ್ಷರದ ಪೋಸ್ಟರ್ಗಳು ಸಹ ಇವೆ. ಹೂಡಿಕೆದಾರರು ಒಂದೇ ದಿನದಲ್ಲಿ 100,000 ಡಾಲರ್ ಗಿಂತ ಹೆಚ್ಚು ಬಿಡ್ ಮಾಡಿದ್ದಾರೆ.
ಎನ್ಎಫ್ಟಿ ಒಂದು ಫಂಗಬಲ್ ಅಲ್ಲದ ಟೋಕನ್. ಇದನ್ನು ಕ್ರಿಪ್ಟೋಗ್ರಾಫಿಕ್ ಟೋಕನ್ ಎಂದೂ ಕರೆಯಬಹುದು. ಎನ್ಎಫ್ಟಿ ಮೂಲಕ, ಡಿಜಿಟಲ್ ಜಗತ್ತಿನ ಯಾವುದೇ ವಿಶೇಷ ಕಲೆ ಅಥವಾ ಯಾವುದೇ ಪುರಾತನ ವಸ್ತುಗಳನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಇದರಲ್ಲಿ, ಪೇಂಟಿಂಗ್ಗಳು, ಪೋಸ್ಟರ್ಗಳು, ವೀಡಿಯೊಗಳು ಮತ್ತು ಆಡಿಯೊಗಳನ್ನು ಸಹ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಪ್ರತಿಯಾಗಿ ಎನ್ ಎಫ್ ಟಿಎಸ್ ಎಂಬ ಡಿಜಿಟಲ್ ಟೋಕನ್ ಸಿಗಲಿದೆ.