alex Certify ರೇಖಾ-ಬಿಗ್ ಬಿ ಹೆಸರು ಕೇಳ್ತಿದ್ದಂತೆ ಅಚ್ಚರಿಗೊಂಡ ಅಮಿತಾಬ್ ಬಚ್ಚನ್ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಖಾ-ಬಿಗ್ ಬಿ ಹೆಸರು ಕೇಳ್ತಿದ್ದಂತೆ ಅಚ್ಚರಿಗೊಂಡ ಅಮಿತಾಬ್ ಬಚ್ಚನ್ ಹೇಳಿದ್ದೇನು…?

ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಹೆಸರಿನ ಜೊತೆ ಎವರ್ ಗ್ರೀನ್ ನಟಿ ರೇಖಾ ಹೆಸರು ಬಂದೇ ಬರುತ್ತೆ. ರೇಖಾ ಹಾಗೂ ಅಮಿತಾಬ್ ಬಚ್ಚನ್ ಲವ್ ಸ್ಟೋರಿ ಉತ್ತುಂಗದಲ್ಲಿತ್ತು. ಆದ್ರೆ ಈ ಸಂಬಂಧಕ್ಕೆ ಹೆಸರಿಡಲು ಸಾಧ್ಯವಾಗ್ಲಿಲ್ಲ. ಈಗ್ಲೂ ಅವರಿಬ್ಬರ ಪ್ರೇಮ ಕಥೆ ಬಗ್ಗೆ ಜನರು ಮಾತನಾಡ್ತಿರುತ್ತಾರೆ.

ಬಿಗ್ ಬಿ ಬಗ್ಗೆ ರೇಖಾ ಅನೇಕ ಬಾರಿ ಮಾತನಾಡಿದ್ದಾರೆ. ಅವರನ್ನು ಪತಿ ಸ್ಥಾನದಲ್ಲಿಟ್ಟಿದ್ದಾರೆಂಬ ಮಾತುಗಳೂ ಆಗಾಗ ಕೇಳಿ ಬರ್ತಿರುತ್ತವೆ. ಸಿನಿಮಾದಿಂದ ಹೊರಗುಳಿದ ನಂತ್ರವೂ ರೇಖಾ ಪ್ರಸಿದ್ಧಿ ಕಡಿಮೆಯಾಗಿಲ್ಲ. ಸಾಕಷ್ಟು ಫೋಟೋಶೂಟ್ ಗಳ ಮೂಲಕ ಎವರ್ ಗ್ರೀನ್ ನಟಿ ಎಂಬುದನ್ನು ರೇಖಾ ಸಾಭೀತುಪಡಿಸಿದ್ದಾರೆ.

Omg: 51 ವರ್ಷಗಳ ಬಳಿಕ ಕೊನೆಗೂ ಸಿಕ್ತು ಕಳೆದು ಹೋಗಿದ್ದ ಪರ್ಸ್…!

ಸಂದರ್ಶನವೊಂದರಲ್ಲಿ ರೇಖಾಗೆ, ಅಮಿತಾಬ್ ಪ್ರೀತಿಯ ಬಗ್ಗೆ ಕೇಳಲಾಗಿತ್ತು. ಅದಕ್ಕೆ ರೇಖಾ ಸ್ಮಾರ್ಟ್ ಆಗಿ ಉತ್ತರ ನೀಡಿದ್ದರು. ಅಮಿತಾಬ್ ಪ್ರೀತಿಗೆ ಬೀಳದವರಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬಚ್ಚನ್ ಪ್ರೀತಿಸ್ತಾರೆ. ನನ್ನನ್ನು ಮಾತ್ರ ಯಾಕೆ ಪ್ರತ್ಯೇಕವಾಗಿ ನೋಡ್ತೀರಾ? ನಾನು ಕೂಡ ಎಲ್ಲರಂತೆ ಅಮಿತಾಬ್ ಪ್ರೀತಿಸ್ತೇನೆ ಎಂದಿದ್ದರು.

ರೇಖಾ ಈ ಮಾತು ಸಾಕಷ್ಟು ಸುದ್ದಿ ಮಾಡಿತ್ತು. ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಇದು ಚರ್ಚೆಯಾಗಿತ್ತು. ಈ ವೇಳೆ ಅಮಿತಾಬ್ ಬಚ್ಚನ್ ಇದಕ್ಕೆ ಉತ್ತರ ನೀಡಿದ್ದರು. ರೇಖಾ ನಮ್ಮ ಮನೆಯಲ್ಲಿದ್ದಾರೆಂಬ ಸುದ್ದಿಯಿದೆ. ಇದು ಹೇಗೆ ಸಾಧ್ಯ. ನಾನು ಪಾಲಕರ ಜೊತೆಗಿದ್ದೇನೆ. ನಮ್ಮಿಬ್ಬರ ಬಗ್ಗೆ ಸುದ್ದಿ ಹಬ್ಬಿಸುವ ಮಾಧ್ಯಮಗಳು, ನಾವಿಬ್ಬರು ಒಟ್ಟಿಗಿರುವುದನ್ನು ನೋಡಿದ್ದಾರಾ? ನಾವಿಬ್ಬರು ಕೆಟ್ಟ ಸ್ಥಿತಿಯಲ್ಲಿದ್ದುದ್ದನ್ನು ಅವರು ನೋಡಿದ್ದಾರಾ ಎಂದು ಬಚ್ಚನ್ ಪ್ರಶ್ನೆ ಕೇಳಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...