![](https://kannadadunia.com/wp-content/uploads/2025/02/sholay.jpg)
1975 ರಲ್ಲಿ ಬಿಡುಗಡೆಯಾದ ‘ಶೋಲೆ’ ಇಂದಿಗೂ ಜನಪ್ರಿಯ ಚಲನಚಿತ್ರವಾಗಿದೆ. ರಮೇಶ್ ಸಿಪ್ಪಿ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಹೇಮಾ ಮಾಲಿನಿ, ಧಮೇಂದ್ರ, ಸಂಜೀವ್ ಕುಮಾರ್, ಅಮ್ಜದ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಯೆ ದೋಸ್ತಿ ಹಮ್ ನಹಿ ಚೋಡೆಂಗೆ’ ಇಂದ ‘ಜಬ್ ತಕ್ ಹೈ ಜಾನ್ʼ ತನಕ ಎಲ್ಲ ಹಾಡುಗಳು ಇಂದಿಗೂ ಜನಮಾನಸದಲ್ಲಿದ್ದು, ಈ ವರ್ಷ ಶೋಲೆ ಚಿತ್ರ 50 ವರ್ಷಗಳನ್ನು ಪೂರೈಸಿದೆ. ಜನವರಿಯಲ್ಲಿ ನಿರ್ದೇಶಕರು ಚಿತ್ರದ ವಿಶೇಷ ಜುಬಿಲಿ ಅಂಚೆ ಕವರ್ ಅನ್ನು ಸಹ ಅನಾವರಣಗೊಳಿಸಿದ್ದರು.
ಈ ಬ್ಲಾಕ್‌ಬಸ್ಟರ್ 50 ವರ್ಷಗಳನ್ನು ಪೂರೈಸಿದಂತೆ, ಹಳೆಯ ಸಿನೆಮಾ ಥಿಯೇಟರ್ ಟಿಕೆಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಪ್ರಾರಂಭಿಸಿದ್ದು, ಟಿಕೆಟ್ ದರ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ಇಂದು, ಥಿಯೇಟರ್ ಅನುಭವವು ದುಬಾರಿ ವ್ಯವಹಾರವಾಗಿದೆ, ನಾಲ್ಕು ಜನರ ಕುಟುಂಬವು ಆಹಾರ ಸೇರಿದಂತೆ ಸುಮಾರು 3000-4000 ರೂ. ಖರ್ಚು ಮಾಡಬೇಕಾಗುತ್ತದೆ. ಆದರೆ 1975 ರಲ್ಲಿ ದರಗಳು ಎಷ್ಟಿರಬಹುದು ಎಂದು ನೀವು ಊಹಿಸಬಲ್ಲಿರಾ ?
- ಬ್ಯಾಕ್ ಸ್ಟಾಲ್: 1.50 ರಿಂದ 2.00 ರೂಪಾಯಿಗಳು
- ಮಿಡಲ್ ಸ್ಟಾಲ್: 2.50 ರೂಪಾಯಿಗಳು
- ಬಾಲ್ಕನಿ (ಅತ್ಯಂತ ದುಬಾರಿ): 3 ರೂಪಾಯಿಗಳು
ಆ ಸಮಯದಲ್ಲಿ, ಈ ಚಿತ್ರವನ್ನು ತಯಾರಿಸಲು 3 ಕೋಟಿ ರೂ. ಖರ್ಚು ಮಾಡಲಾಗಿದ್ದು, ಇದರಲ್ಲಿ 20 ಲಕ್ಷ ರೂ. ಗಳನ್ನು ಪಾತ್ರವರ್ಗಕ್ಕೆ ವ್ಯಯಿಸಲಾಗಿತ್ತು. ಸಂದರ್ಶನವೊಂದರಲ್ಲಿ, ನಿರ್ದೇಶಕರು ತಮ್ಮ ತಂದೆ ಜಿ.ಪಿ. ಸಿಪ್ಪಿ ಚಿತ್ರದ ನಿರ್ಮಾಣದ ಸಮಯದಲ್ಲಿ ತಮ್ಮೊಂದಿಗೆ ಇದ್ದಿದ್ದು ಅದೃಷ್ಟ ಎಂದು ಹೇಳಿದ್ದರು. ಸಿಪ್ಪಿ ಅವರು ಇಂದು ‘ಶೋಲೆ’ ನಿರ್ಮಿಸಿದ್ದರೆ, ಅದರ ಬಜೆಟ್ 150 ಕೋಟಿ ರೂ. ಆಗಿರುತ್ತಿತ್ತು ಮತ್ತು 100 ಕೋಟಿ ರೂ. ಗಳನ್ನು ತಾರಾ ಬಳಗಕ್ಕೆ ಮಾತ್ರ ಖರ್ಚು ಮಾಡಬೇಕಾಗುತ್ತಿತ್ತು ಎಂದಿದ್ದರು.
ಈ ಚಿತ್ರವು ಸತತ ಐದು ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತು ಮತ್ತು BBC ಇಂಡಿಯಾದಿಂದ 1999 ರಲ್ಲಿ “ಮಿಲೇನಿಯಮ್‌ನ ಚಲನಚಿತ್ರ” ಎಂದು ಪರಿಗಣಿಸಲ್ಪಟ್ಟಿತು.
(ಈ ಕೆಳಗಿನ ಚಿತ್ರವು ಶೋಲೆ ಚಿತ್ರದ ವಿಶೇಷ ಪ್ರದರ್ಶನವೊಂದರದ್ದಾಗಿದ್ದು, ಇದರ ಬೆಲೆ ದುಬಾರಿಯಾಗಿದೆ)