ತಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ‘ಭಾರತ್ ಜೋಡೋ’ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧರಿಸಿದ್ದ ಟಿ-ಶರ್ಟ್ ಬೆಲೆ ಕುರಿತು ಬಿಜೆಪಿ ಇತ್ತೀಚೆಗೆ ವ್ಯಂಗ್ಯವಾಡಿತ್ತು.
ರಾಹುಲ್ ಗಾಂಧಿಯವರ ಟೀ ಶರ್ಟ್ ಬೆಲೆ 40,000 ರೂ. ಗಳಿಗೂ ಅಧಿಕಾರ ಎಂದು ವ್ಯಂಗ್ಯ ಮಾಡಲಾಗಿದ್ದು, ಭಾರತ್ ದೇಖೋ ಎಂದು ಹೇಳಿತ್ತು. ಇದಾದ ಬಳಿಕ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ಸೂಟ್ ಸೇರಿದಂತೆ ಬಿಜೆಪಿ ನಾಯಕರ ದುಬಾರಿ ಬೆಲೆಯ ವಸ್ತುಗಳ ಕುರಿತು ಟೀಕೆ ಮಾಡುತ್ತಿದ್ದಾರೆ.
ಇದೀಗ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕೇಂದ್ರ ಗೃಹ ಸಚಿವ ಅಮಿತ್ ಷಾ ಬಳಸುವ ಮಫ್ಲರ್ ಬೆಲೆ 80,000 ರೂಪಾಯಿ ಎಂದು ಆರೋಪ ಮಾಡಿದ್ದಾರಲ್ಲದೆ, ಬಿಜೆಪಿಯ ಬಹುತೇಕ ನಾಯಕರು 2.5 ಲಕ್ಷಕ್ಕೂ ಅಧಿಕ ಮೌಲ್ಯದ ಸನ್ ಗ್ಲಾಸ್ ಹಾಕಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.