alex Certify GOOD NEWS: ಮನೆಯಲ್ಲೇ ಜನನ, ಮರಣ ನೋಂದಣಿಗೆ ಕೇಂದ್ರದಿಂದ ಮೊಬೈಲ್ ಆ್ಯಪ್ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಮನೆಯಲ್ಲೇ ಜನನ, ಮರಣ ನೋಂದಣಿಗೆ ಕೇಂದ್ರದಿಂದ ಮೊಬೈಲ್ ಆ್ಯಪ್ ಬಿಡುಗಡೆ

ನವದೆಹಲಿ: ಜನನ ಮತ್ತು ಮರಣ ನೋಂದಣಿಗಳನ್ನು ಮನೆಯಿಂದಲೇ ಮಾಡಿಸಲು ಅನುಕೂಲವಾಗುವಂತೆ ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಂ(ಸಿ.ಆರ್.ಎಸ್.) ಮೊಬೈಲ್ ಆ್ಯಪ್ ಅನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.

ಜನನ ಮತ್ತು ಮರಣಗಳನ್ನು ಎಲ್ಲಿಂದಲಾದರೂ ಯಾವುದೇ ಸಮಯದಲ್ಲಿ ಸಿ.ಆರ್.ಎಸ್. ಆ್ಯಪ್ ಮೂಲಕ ನೋಂದಾಯಿಸಲುಬಹುದಾಗಿದೆ.

ನೋಂದಣಿಗೆ ಬಯಸುವವರು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಸಿ.ಆರ್.ಎಸ್. ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಯೂಸರ್ ಐಡಿ ಪಾಸ್ವರ್ಡ್ ಆಗಲಿಸಬೇಕು ನೈಜತೆ ಪರಿಶೀಲನೆಗಾಗಿ ಮೊಬೈಲ್ ಗೆ ಎಸ್ಎಂಎಸ್ ಮೂಲಕ ಒಟಿಪಿ ಬರಲಿದ್ದು, ಅದನ್ನು ದೃಢೀಕರಿಸಬೇಕು.

ಮುಖಪುಟ ಪರದೆಯಲ್ಲಿ ಪ್ರೊಫೈಲ್, ಜನನ, ಸಾವು, ಶುಲ್ಕ ಆಯ್ಕೆಗಳು ಕಾಣಿಸುತ್ತದೆ. ಜನ್ಮ ದಿನಾಂಕವನ್ನು ನೋಂದಾಯಿಸಲು ಜನನ ಮತ್ತು ನಂತರ ಜನನ ನೋಂದಣಿ ಆಯ್ಕೆ ಮಾಡಿ ಮಗುವಿನ ಜನ್ಮ ದಿನಾಂಕ, ವಿಳಾಸ, ಕುಟುಂಬದ ಮಾಹಿತಿ ನಮೂದಿಸಿ ಅಗತ್ಯ ದಾಖಲೆ ಲಗತ್ತಿಸಬೇಕು.

ಮರಣ ನೋಂದಾಯಿಸಲು ಇದೇ ರೀತಿ ಪ್ರಕ್ರಿಯೆ ಮಾಡಿ ಮರಣ ದಿನಾಂಕ, ವಿಳಾಸ ಇತರೆ ಮಾಹಿತಿ ದಾಖಲಿಸಿ ಆನ್ಲೈನ್ ನಲ್ಲಿ ಶುಲ್ಕ ಪಾವತಿಸಿದರೆ ಜನನ ಅಥವಾ ಮರಣದ ಡಿಜಿಟಲ್ ಪ್ರಮಾಣ ಪತ್ರ ಬರಲಿದ್ದು, ಅದನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...