ದೇಶದ ಅನೇಕ ರಾಜ್ಯಗಳಲ್ಲಿ ಲಸಿಕೆಗಳ ಕೊರತೆ ಇರುವ ನಡುವೆಯೇ ಸೀರಮ್ ಸಂಸ್ಥೆಯು ಜೂನ್ ತಿಂಗಳಲ್ಲಿ ತಾನು ಒಂಬತ್ತರಿಂದ ಹತ್ತು ಕೋಟಿಯಷ್ಟು ಕೋವಿಶೀಲ್ಡ್ ಲಸಿಕೆಗಳನ್ನು ಉತ್ಪಾದಿಸುವುದಾಗಿ ಹೇಳಿಕೊಂಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬರೆದ ಪತ್ರವೊಂದಲ್ಲಿ, ಪುಣೆ ಮೂಲದ ಲಸಿಕೆ ಉತ್ಪಾದಕ, ತನ್ನ ಉದ್ಯೋಗಿಗಳು ಹಗಲು-ಇರುಳು ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಲಸಿಕೆ ಉತ್ಪಾದಿಸುತ್ತಿದ್ದಾರೆ ಎಂದು ತಿಳಿಸಿದೆ.
“ಜೂನ್ ತಿಂಗಳಲ್ಲಿ ನಾವು 9-10 ಕೋಟಿಯಷ್ಟು ಕೋವಿಶೀಲ್ಡ್ ಲಸಿಕೆಗಳನ್ನು ಉತ್ಪಾದಿಸಿ ಪೂರೈಕೆ ಮಾಡಲಿದ್ದೇವೆ ಎಂದು ತಿಳಿಸಲು ಖುಷಿ ಪಡುತ್ತೇವೆ. ಮೇ ತಿಂಗಳಲ್ಲಿ ಉತ್ಪಾದನೆಯಾದ 6.5 ಕೋಟಿ ಲಸಿಕೆಗಳಿಗೆ ಹೋಲಿಸಿದಲ್ಲಿ ನಮ್ಮ ಉತ್ಪಾದನಾ ಸಾಮರ್ಥ್ಯ ಇಷ್ಟರ ಮಟ್ಟಿಗೆ ಏರಿಕೆ ಕಾಣಲಿದೆ” ಎಂದು ಸೀರಮ್ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ 12 ಕೋಟಿ ಕೋವಿಶೀಲ್ಡ್ ಲಸಿಕೆಗಳು ಲಭ್ಯವಿರಲಿವೆ ಎಂದು ಸರ್ಕಾರ ಘೋಷಿಸಿದೆ.