alex Certify ಇಲ್ಲಿ ಟೊಮೆಟೋ ಕೆ.ಜಿ.ಗೆ ಜಸ್ಟ್ 20 ರೂಪಾಯಿ; ಕೆಲವೇ ಗಂಟೆಗಳಲ್ಲಿ ಅಂಗಡಿ ಫುಲ್‌ ಖಾಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿ ಟೊಮೆಟೋ ಕೆ.ಜಿ.ಗೆ ಜಸ್ಟ್ 20 ರೂಪಾಯಿ; ಕೆಲವೇ ಗಂಟೆಗಳಲ್ಲಿ ಅಂಗಡಿ ಫುಲ್‌ ಖಾಲಿ…!

ದೇಶಾದ್ಯಂತ ಗೃಹಿಣಿಯರಿಂದ ಹಿಡಿದು ವಯೋ ವೃದ್ದರವರೆಗೆ ಎಲ್ಲರ ಬಾಯಲ್ಲೂ ಒಂದೇ ಮಾತು. ಅದು ಏನೆಂದರೆ ಟೊಮ್ಯಾಟೊ ಬೆಲೆ ಏರಿಕೆಯ ಬಗ್ಗೆ. ಈಗ ಟೊಮ್ಯಾಟೊ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಕಳೆದ 2-3 ವಾರದ ಹಿಂದೆ ಇದೇ ಟೊಮೆಟೊ ಬೆಲೆ ಅಬ್ಬಬ್ಬಾ ಅಂದ್ರೆ ಕೆ.ಜಿಗೆ 20-30 ರೂಪಾಯಿ ಇತ್ತು. ಆದರೆ ಈಗ ಅದೇ ಟೊಮೆಟೊ ಬೆಲೆ ಕೆ.ಜಿಗೆ 130-150 ರೂಪಾಯಿ ಆಗಿದೆ.

ಇಂತಹ ಕಾಸ್ಟ್ಲಿ ಜಮಾನಾದಲ್ಲಿ ತಮಿಳುನಾಡಿನಲ್ಲಿ ತರಕಾರಿ ವ್ಯಾಪಾರಿಯೊಬ್ಬರು ಇದೇ ಟೊಮೆಟೊವನ್ನ ಕೆ.ಜಿ.ಗೆ 20 ರೂಪಾಯಿಯಂತೆ ಮಾರಿದ್ದಾರೆ. ಇಷ್ಟು ಕಡಿಮೆ ಬೆಲೆಯಲ್ಲಿ ಟೊಮೆಟೊ ಸಿಗುತ್ತೆ ಅಂದ್ರೆ ಜನ ಬಿಡ್ತಾರಾ ? ಚೀಲ ತುಂಬ್ಕೊಂಡು ಹೋಗಿದ್ದಾರೆ.

ಅಸಲಿಗೆ ತರಕಾರಿ ವ್ಯಾಪಾರಿ ಮಾಡುತ್ತಿರುವ ಡಿ. ರಾಜೇಶ್, ಕಡಲೂರು ಜಿಲ್ಲೆ ಸೆಲ್ಲನ್ ಕುಪ್ಪನ್ನಲ್ಲಿ ಅಂಗಡಿಯನ್ನ ಇಟ್ಟುಕೊಂಡಿದ್ದಾರೆ. ಕಳೆದ 4ವರ್ಷದಿಂದಲೂ ಇಲ್ಲಿ ತರಕಾರಿ ವ್ಯಾಪಾರವನ್ನ ಮಾಡುತ್ತಿದ್ದಾರೆ. ತಮ್ಮ ವ್ಯಾಪಾರಕ್ಕೆ 4 ವರ್ಷ ತುಂಬಿರುವ ಹಿನ್ನೆಲೆಯಲ್ಲಿ, ಕೆ.ಜಿ. ಗೆ 120 ರೂಪಾಯಿ ಇದ್ದ ಟೊಮೆಟೊವನ್ನ 20 ರೂಪಾಯಿಗೆ ಮಾರಿದ್ದಾರೆ.

‘ನಾನು ಅಂಗಡಿಯನ್ನ ಆರಂಭಿಸಿ 4ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬೆಲೆ ಟೊಮೆಟೊ ಮಾರಿದ್ದೇನೆ. ಗ್ರಾಹರಿಗೆ ಇದರಿಂದ ಕೊಂಚ ನೆರವಾಗಲಿ ಅನ್ನೊದೇ ನನ್ನ ಉದ್ದೇಶ. ನಾನು ಈ ಟೊಮೆಟೊವನ್ನ ಮಾರುಕಟ್ಟೆಯಲ್ಲಿ ಕೆ.ಜಿ. ಗೆ 60 ರೂಪಾಯಿಯಂತೆ ಖರೀದಿಸಿದ್ದೇನೆ. ಆದರೆ ನನಗೆ ನಷ್ಟವಾದರೂ ನಾನು 20 ರೂಪಾಯಿಯಂತೆ ಗ್ರಾಹಕರಿಗೆ ಕೊಟ್ಟಿದ್ದೇನೆ. ಗ್ರಾಹಕರಿಗೆ ಈ ಆಫರ್ ಗೊತ್ತಾಗ್ತಿದ್ದಂತೆ ಕೆಲವೇ ಕೆಲ ಗಂಟೆಗಳಲ್ಲಿ ಅಂಗಡಿಯಲ್ಲಿದ್ದ ಟೊಮೆಟೊ ಖಾಲಿಯಾಗಿದೆ’ ಎಂದಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...