alex Certify BIG NEWS: ಸಾಂಕ್ರಾಮಿಕ ರೋಗಗಳ ಹೆಚ್ಚಳದ ಬೆನ್ನಲ್ಲೇ IMA ಮಹತ್ವದ ಸಲಹೆ; ಆಂಟಿ ಬಯೋಟಿಕ್ ಶಿಫಾರಸ್ಸು ಮಾಡದಿರಲು ವೈದ್ಯರಿಗೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಾಂಕ್ರಾಮಿಕ ರೋಗಗಳ ಹೆಚ್ಚಳದ ಬೆನ್ನಲ್ಲೇ IMA ಮಹತ್ವದ ಸಲಹೆ; ಆಂಟಿ ಬಯೋಟಿಕ್ ಶಿಫಾರಸ್ಸು ಮಾಡದಿರಲು ವೈದ್ಯರಿಗೆ ಸೂಚನೆ

ಬೇಸಿಗೆ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ಕಾಯಿಲೆಗಳು ಸಹ ಶುರುವಾಗಿವೆ. ಕೆಮ್ಮು, ಜ್ವರ, ಶೀತ ಮೊದಲಾದವು ಕಾಣಿಸಿಕೊಳ್ಳುತ್ತಿದ್ದು H3N2 ವೈರಸ್ ಸೋಂಕು ಕೂಡ ಹೆಚ್ಚಾಗುತ್ತಿದೆ. ಇದರ ಮಧ್ಯೆ ಭಾರತೀಯ ವೈದ್ಯಕೀಯ ಮಂಡಳಿ ಮಹತ್ವದ ಸಲಹೆಯನ್ನು ನೀಡಿದೆ.

ಕೆಮ್ಮು, ಜ್ವರ, ಶೀತ ಮೊದಲಾದವುಗಳ ಕಾರಣಕ್ಕಾಗಿ ರೋಗಿಗಳು ಬಂದ ಸಂದರ್ಭದಲ್ಲಿ ಆಂಟಿ ಬಯೋಟಿಕ್ ಗಳನ್ನು ಶಿಫಾರಸ್ಸು ಮಾಡುವುದನ್ನು ಅದಷ್ಟು ತಪ್ಪಿಸಲು ಸೂಚನೆ ನೀಡಿದೆ. ಈ ಕುರಿತ ಸೂಚನೆಯನ್ನು ಐಎಂಎ ತನ್ನ ಸಾಮಾಜಿಕ ಜಾಲತಾಣದ ವಿವಿಧ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದೆ.

ಕೆಮ್ಮು, ಜ್ವರ, ಶೀತ ಮೊದಲಾದವುಗಳ ಕಾರಣಕ್ಕಾಗಿ ರೋಗಿಗಳು ಬಂದ ಸಂದರ್ಭದಲ್ಲಿ ಆಂಟಿ ಬಯೋಟಿಕ್ ಗಳ ಶಿಫಾರಸ್ಸು ಮಾಡುವುದನ್ನು ಆದಷ್ಟು ಅವಾಯ್ಡ್‌ ಮಾಡಿ ಎಂದು ಸೂಚನೆ ನೀಡಿದೆ. ಈ ಕುರಿತ ಸೂಚನೆಯನ್ನು ಐಎಂಎ ತನ್ನ ಸಾಮಾಜಿಕ ಜಾಲತಾಣದ ವಿವಿಧ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದೆ.

ಸಾಂಕ್ರಾಮಿಕದ ಕಾರಣಕ್ಕೆ ಕಾಣಿಸಿಕೊಳ್ಳುವ ಜ್ವರ ನಾಲ್ಕೈದು ದಿನಗಳಲ್ಲಿ ಯಾವುದೇ ಔಷಧ ಸೇವಿಸದಿದ್ದರೂ ಸಾಮಾನ್ಯವಾಗಿ ಗುಣವಾಗುತ್ತದೆ. ಆದರೆ ಕೆಮ್ಮು ಎರಡರಿಂದ ಮೂರು ವಾರಗಳವರೆಗೆ ಮುಂದುವರಿಯಬಹುದು ಎಂದು ತಿಳಿಸಲಾಗಿದೆ.

ಸಾರ್ವಜನಿಕರು ಸಹ ಆಂಟಿಬಯೋಟಿಕ್ ಗಳನ್ನು ಸ್ವತಃ ತೆಗೆದುಕೊಂಡು ಸೇವಿಸಬಾರದು. ಕೆಮ್ಮು, ಶೀತ, ಜ್ವರ ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟವರು ಹಾಗೂ 15 ವರ್ಷ ಒಳಗಿನವರಿಗೆ ಕಾಣಿಸಿಕೊಳ್ಳುತ್ತಿದ್ದು, ಉಸಿರಾಟದ ಸಮಸ್ಯೆಯೂ ತಲೆದೋರಬಹುದಾಗಿದೆ. ಒಂದೊಮ್ಮೆ ತೀವ್ರತರ ಜ್ವರ, ಶೀತ, ಕೆಮ್ಮು ಅಥವಾ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ತಜ್ಞ ವೈದ್ಯರ ಸಲಹೆ ಪಡೆದು ಅವರ ಸಲಹೆಯಂತೆ ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...