ನ್ಯೂಜಿಲೆಂಡ್‌ನಲ್ಲಿ ದಯಾಮರಣ ಕಾನೂನು ಜಾರಿಗೆ ಬಂದಿದೆ. ಜನರು ಸ್ವಂತ ಇಚ್ಛೆಯ ಮರಣವನ್ನು ಸ್ವೀಕರಿಸಬಹುದು. ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವವರು, ದಯಾ ಮರಣಕ್ಕೆ ಮುಂದಾಗಬಹುದು. ಈ ಹಿಂದೆ, ಅಮೆರಿಕ, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್, ಸ್ಪೇನ್, ಬೆಲ್ಜಿಯಂ, ಲಕ್ಸೆಂಬರ್ಗ್, ಕೆನಡಾ ಸೇರಿದಂತೆ ಇತರ ಕೆಲವು ದೇಶಗಳಲ್ಲಿ ದಯಾಮರಣ ಕಾನೂನು ಜಾರಿಗೆ ಬಂದಿದೆ.
ದಯಾ ಮರಣಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ಕಾನೂನು ಜಾರಿಯಲ್ಲಿದೆ. ನ್ಯೂಜಿಲೆಂಡ್‌ನಲ್ಲಿ ಕಾನೂನಿಗೆ ವಿರೋಧ ವ್ಯಕ್ತವಾಗಿದೆ. ಆದ್ರೆ ವಿರೋಧದ ಮಧ್ಯೆಯೇ ಈ ಕಾನೂನು ಜಾರಿಗೆ ಬಂದಿದೆ.
ವರದಿ ಪ್ರಕಾರ, ದಯಾಮರಣವನ್ನು ಬಯಸುವ ವ್ಯಕ್ತಿಯು ಕನಿಷ್ಠ ಇಬ್ಬರು ವೈದ್ಯರ ಒಪ್ಪಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಈ ಕಾನೂನಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನ್ಯೂಜಿಲೆಂಡ್‌ನಲ್ಲಿ ಸುದೀರ್ಘ ಚರ್ಚೆ ನಡೆಯುತ್ತಿದೆ. ನ್ಯೂಜಿಲ್ಯಾಂಡ್ ನ ಶೇಕಡಾ 65 ಕ್ಕಿಂತ ಹೆಚ್ಚು ಜನರು ದಯಾ ಮರಣದ ಪರವಾಗಿ ಮತ ಚಲಾಯಿಸಿದ್ದರು.
ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವವರು ಅಥವಾ ಅವರ ಬದುಕು ಇನ್ನು 6 ತಿಂಗಳು ಮಾತ್ರ ಎಂದು ವೈದ್ಯರು ಹೇಳಿದ್ದರೆ ಅಂಥವರು ದಯಾಮರಣಕ್ಕೆ ಅರ್ಜಿ ಸಲ್ಲಿಸಬಹುದು. ಪ್ರತಿ ವರ್ಷ 950 ಮಂದಿ ಹೊಸ ಕಾನೂನಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅದರಲ್ಲಿ 350 ಮಂದಿಗೆ ಒಪ್ಪಿಗೆ ನೀಡಲಾಗುವುದು ಎಂದು ಕಾನೂನು ಹೇಳುತ್ತದೆ.