ಪಂಜಾಬ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಪಂಜಾಬ್ ಸ್ಥಳೀಯ ಚುನಾವಣೆಯಲ್ಲಿ ಕೈ ಮೇಲುಗೈ ಸಾಧಿಸಿದೆ. ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, 7 ಮುನಿಸಿಪಾಲ್ ಕಾರ್ಪೋರೇಷನ್ ಪೈಕಿ ಆರರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮೊಗಾ, ಹೋಶಿಯಾರ್‌ಪುರ್, ಕಪುರ್ಥಾಲಾ, ಅಬೋಹರ್, ಪಠಾಣ್‌ಕೋಟ್ ಮತ್ತು ಬತಿಂಡಾದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ.
ಬತಿಂಡಾದಲ್ಲಿ ಕಾಂಗ್ರೆಸ್ ದಾಖಲೆ ಬರೆದಿದೆ. 53 ವರ್ಷಗಳ ನಂತ್ರ ಕಾಂಗ್ರೆಸ್ ಇಲ್ಲಿ ಗೆಲುವು ದಾಖಲಿಸಿ ಅಚ್ಚರಿಗೊಳಿಸಿದೆ. ಬತಿಂಡಾ ಕ್ಷೇತ್ರವನ್ನು ಶಿರೋಮಣಿ ಅಕಾಲಿ ದಳದ ಹರ್ಸಿಮ್ರತ್ ಬಾದಲ್ ಪ್ರತಿನಿಧಿಸುತ್ತಿದ್ದಾರೆ. ಕೇಂದ್ರದ ಮೂರು ಹೊಸ ಕೃಷಿ ಕಾನೂನಿಗೆ ರಾಜ್ಯದ ರೈತರಿಂದ ವಿರೋಧ ವ್ಯಕ್ತವಾದ್ಮೇಲೆ ಅವ್ರು ಬಿಜೆಪಿ ಮೈತ್ರಿಯಿಂದ ದೂರವಾಗಿದ್ದರು.
ಶಿರೋಮಣಿ ಅಕಾಲಿ ದಳ, ಭಾರತೀಯ ಜನತಾ ಪಕ್ಷ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮುಖಾಮುಖಿಯಾಗಿದ್ದವು. 2022 ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್, ಎಸ್‌ಎಡಿ, ಬಿಜೆಪಿ ಮತ್ತು ಎಎಪಿಗೆ ಈ ಚುನಾವಣೆ ಬಹಳ ಮುಖ್ಯವಾಗಿದೆ.
ಈ ಚುನಾವಣೆಯಲ್ಲಿ ಒಟ್ಟು 9 ಸಾವಿರ 222 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಫೆಬ್ರವರಿ 7 ಮುನಿಸಿಪಾಲ್ ಕಾರ್ಪೋರೇಷನ್ ಗೆ ಚುನಾವಣೆ ನಡೆದಿತ್ತು. ರೈತರ ಪ್ರತಿಭಟನೆ ಮಧ್ಯೆ ಶೇಕಡಾ 71.39ರಷ್ಟು ಮತದಾನವಾಗಿತ್ತು. ನಿನ್ನೆ ಕೆಲ ಬೂತ್ ಗಳಿಗೆ ಮರುಮತದಾನ ನಡೆದಿದ್ದು, ಅದ್ರ ಮತ ಎಣಿಕೆ ನಾಳೆ ನಡೆಯಲಿದೆ.