
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿ ಕುರಿತಾದ ಹೇಳಿಕೆ ವಿವಾದವಾಗುತ್ತಿದ್ದಂತೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ‘ತಮಿಳು ನಮ್ಮ ಅಸ್ತಿತ್ವದ ಮೂಲ’ ಎಂಬ ಪೋಸ್ಟ್ ಹಂಚಿಕೊಂಡು ವಿವಾದಕ್ಕೆ ಮತ್ತಷ್ಟು ಕಾವೇರಿಸಿದ್ದಾರೆ.
ಎ.ಆರ್. ರೆಹಮಾನ್ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರು ರಾತ್ರಿ 11 ಗಂಟೆಗೆ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಸರಿ ಸುಮಾರು 13,000 ಸಾವಿರಕ್ಕಿಂತ ಹೆಚ್ಚು ರೀಟ್ವೀಟ್ ಆಗಿದೆ.
ಬರೋಬ್ಬರಿ 6.75 ಲಕ್ಷ ರೂಪಾಯಿಗೆ ಹರಾಜಾಯ್ತು ಎ.ಆರ್. ರೆಹಮಾನ್ ಡ್ರೆಸ್..!
ಅಮಿತ್ ಶಾ ಅವರ ವಿವಾದಾತ್ಮಕ ‘ಇಂಗ್ಲಿಷ್ ಬದಲಿಗೆ ಹಿಂದಿ ಮಾತನಾಡು’ ಹೇಳಿಕೆ ನೀಡಿದ ಬಳಿಕ, ಎ.ಆರ್. ರೆಹಮಾನ್ ಟ್ವಿಟ್ಟರ್‌ನಲ್ಲಿ ತಮಿಳನಂಗು (ತಮಿಳು ದೇವತೆ) ಚಿತ್ರವನ್ನು ಹಂಚಿಕೊಂಡಿದ್ದಾರೆ, ಜೊತೆಗೆ ಆಧುನಿಕ ತಮಿಳು ಕವಿ ಭಾರತಿದಾಸನ್ ಅವರು ಬರೆದ ಸಾಲನ್ನು ಉಲ್ಲೇಖಿಸಿದ್ದಾರೆ.
ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಯಾವುದೇ ಭಾಷೆಗಿಂತ ತಮಿಳಿನಲ್ಲಿ ಮಾತನಾಡಲು ಆದ್ಯತೆ ನೀಡುತ್ತಾರೆ. ವಾಸ್ತವವಾಗಿ, ಅವರು ಸ್ಲಮ್‌ಡಾಗ್ ಮಿಲಿಯನೇರ್‌ಗಾಗಿ ಎರಡು ಆಸ್ಕರ್‌ಗಳನ್ನು ಗೆದ್ದಾಗ, ಎ.ಆರ್. ರೆಹಮಾನ್ ತಮ್ಮ ಭಾಷಣವನ್ನು ʼಎಲ್ಲಾ ಪ್ರಶಂಸೆ ದೇವರಿಗೆ ಸಲ್ಲುತ್ತದೆʼ ಎಂದು ತಮಿಳು ಪದಗಳೊಂದಿಗೆ ಮುಗಿಸಿದ್ದರು.