ವಾಷಿಂಗ್ಟನ್: ಅಮೆರಿಕಾದ ಅತಿ ಎತ್ತರದ ವ್ಯಕ್ತಿ ಇಗೊರ್ ವೊವ್ಕೊವಿನ್ಸ್ಕಿ ತನ್ನ 38ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು 7 ಅಡಿ 8 ಇಂಚು ಉದ್ದವಿದ್ದರು.
ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಇಗೊರ್ ಅವರು ರೊಚೆಸ್ಟರ್ ನ ಮೇಯೋ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಿಧನರಾದರು.
ಈತನ ತಾಯಿ ಸೈಟ್ಲಾನಾ ವೊವ್ಕೊವಿನ್ಸ್ಕಿ ಫೇಸ್ಬುಕ್ ನಲ್ಲಿ ಇಗೋರ್ ನಿಧನದ ಬಗ್ಗೆ ಮಾಹಿತಿ ನೀಡಿದ್ದಾರೆ. “ಆಗಸ್ಟ್ 20ರಂದು ರಾತ್ರಿ ಆಸ್ಪತ್ರೆಯಲ್ಲಿ ನಿಧನರಾದರು. ಕೊನೆಯುಸಿರೆಳೆಯುವವರೆಗೂ ಆತ ಧನಾತ್ಮಕವಾಗಿಯೇ ಯೋಚಿಸಿದ್ದ” ಎಂದು ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.