ನ್ಯೂಯಾರ್ಕ್: ಭಾರತಕ್ಕೆ ಪ್ರವಾಸ ಬರುವ ವಿದೇಶಿಗರು ಸ್ಥಳೀಯ ಖಾದ್ಯವನ್ನು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು. ಆದರೆ ವಿದೇಶದಲ್ಲಿ, ಆ ದೇಶದ ವ್ಯಕ್ತಿ ಬಂಗಾಳಿ ಆಹಾರ ಆರ್ಡರ್ ಮಾಡುವುದನ್ನು ಎಂದಾದ್ರೂ ಕೇಳಿದ್ದೀರಾ..?
ಯೂಟ್ಯೂಬರ್ ಆರೀಹ್ ಸ್ಮಿತ್ ಅವರು ಇತ್ತೀಚೆಗೆ ಬಂಗಾಳಿ ಭಾಷೆಯಲ್ಲಿ ಮಾತನಾಡುವ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋ ಅಪ್ಲೋಡ್ ಆದ ಒಂದು ವಾರದೊಳಗೆ ಸುಮಾರು 4 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಹಾಗೂ ಈ ವಿಡಿಯೋ ಕ್ಲಿಪ್, ಸ್ಮಿತ್ ಯುಎಸ್ನ ನ್ಯೂಯಾರ್ಕ್ನ ಕ್ವೀನ್ಸ್ನಲ್ಲಿರುವ ಮಾರುಕಟ್ಟೆಯಲ್ಲಿ ಆಹಾರವನ್ನು ಆರ್ಡರ್ ಮಾಡುತ್ತಿರುವುದನ್ನು ತೋರಿಸುತ್ತದೆ.
ಸ್ಮಿತ್ ಮಾರುಕಟ್ಟೆಯಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಪ್ರಯತ್ನಿಸುತ್ತಾ ಅಂಗಡಿಯಿಂದ ಅಂಗಡಿಗೆ ಹೋಗುತ್ತಾನೆ. ವಿಶ್ವದಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಬಂಗಾಳಿ ಕೂಡ ಒಂದಾಗಿದೆ ಎಂಬ ಅಂಶವನ್ನು ಯೂಟ್ಯೂಬರ್ ಹೈಲೈಟ್ ಮಾಡುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ.
ಮೊದಲಿಗೆ ಸ್ಮಿತ್ ಪಾನ್ ಅಂಗಡಿಗೆ ಹೋಗುತ್ತಾನೆ. ಅಲ್ಲಿ ಅವನ ಬಂಗಾಳಿ ಉಚ್ಚಾರಣೆಯು ಅಂಗಡಿಯವನನ್ನು ಆಶ್ಚರ್ಯಗೊಳಿಸುತ್ತದೆ. ಸ್ಮಿತ್ ಪಾನ್ ಸವಿಯುತ್ತಾನೆ. ಹಾಗೂ ಅವನ ಭಾಷಾ ಕೌಶಲ್ಯಕ್ಕಾಗಿ ಭಾರತೀಯ ವ್ಯಾಪಾರಿಯಿಂದ ಮೆಚ್ಚುಗೆ ಪಡೆಯುತ್ತಾನೆ.
ಯೂಟ್ಯೂಬರ್ ನಂತರ ಫ್ಲಿಯಾ ಮಾರ್ಕೆಟ್ಗೆ ಹೋಗುತ್ತಾನೆ. ಅಲ್ಲಿ ಅವನು ಪೈಜಾಮ ಖರೀದಿಗೆ ಮುಂದಾಗುತ್ತಾನೆ. ಈ ವೇಳೆ ಅಂಗಡಿಯವರೊಂದಿಗೆ ಬಂಗಾಳಿಯಲ್ಲಿ ಮಾತನಾಡುತ್ತಾನೆ. ಈ ವೇಳೆ ಅಲ್ಲಿದ್ದವರು, ಭಾಷೆಯನ್ನು ಹೇಗೆ ಎಲ್ಲಿ ಕಲಿತಿದ್ದೀರಾ ಎಂದು ಆಶ್ಚರ್ಯಚಕಿತರಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಇನ್ನು ಸ್ಮಿತ್ನ ಬಂಗಾಳಿ ಭಾಷಾ ಪ್ರೀತಿಗೆ ಬೆಂಗಾಲಿಗರು ಮನಸೋತಿದ್ದಾರೆ. ಬಂಗಾಳಿ ಭಾಷೆಯಲ್ಲಿ ಸ್ಮಿತ್ ಮಾತನಾಡಿದ್ದಕ್ಕಾಗಿ ಅನೇಕರು ಶ್ಲಾಘಿಸಿದ್ದಾರೆ.