ಸ್ವಂತ ಮನೆಯ ಕನಸು ಯಾರಿಗೆ ಇರೋಲ್ಲ ಹೇಳಿ. ಕಷ್ಟಪಟ್ಟು ದುಡಿದು, ಸಾಲ-ಸೋಲ ಮಾಡಿಯಾದರೂ ತಮ್ಮದೇ ಆದ ಮನೆಯೊಂದು ಇರಲೇಬೇಕು ಅನ್ನೊ ಆಸೆ ಪ್ರತಿಯೊಬ್ಬರಿಗೂ ಇರುತ್ತೆ. ಇದೇ ರೀತಿ ಆಸೆ ಇಟ್ಟುಕೊಂಡು ಮಹಿಳೆಯೊರ್ವಳು ಅಮೆರಿಕಾದ ಕೆಂಟಕಿ ಎಂಬಲ್ಲಿ ಮನೆಯೊಂದನ್ನ ಖರೀದಿ ಮಾಡುತ್ತಾಳೆ.
ಇನ್ನೇನು ಆ ಮನೆಯೊಳಗೆ ಹೋಗಿ ಸೆಟಲ್ ಆಗ್ಬೇಕು ಅಂತ ಅಂದ್ಕೊಳ್ಳುವಷ್ಟರಲ್ಲೇ ಆ ಮನೆಯಲ್ಲಿ ಠಿಕಾಣಿ ಹಾಕಿಕೊಂಡು ಕೂತಿತ್ತು ಹಳೆ ದೆವ್ವ. ಅದನ್ನ ನಾನು ಕಣ್ಣಾರೆ ನೋಡಿದ್ದೇನೆ ಅಂತ ಆ ಮಹಿಳೆ ಹೇಳುತ್ತಿದ್ದಾಳೆ.
ಅಚ್ಚುಕಟ್ಟಾದ ಮನೆ ತಾನು ಅಂದುಕೊಂಡ ಹಾಗೆಯೇ ಇದೆ. ಅಂತೆಲ್ಲ ಲೆಕ್ಕಾಚಾರ ಮಾಡಿಯೇ ಮನೆ ಖರೀದಿ ಮಾಡಿದ್ದೇ. ಆ ಮನೆಯಲ್ಲಿದ್ದ ಖಾಲಿ ಕೋಣೆಯೊಂದರ ಬಾಗಿಲು ತೆರೆಯುತ್ತಿದ್ದ ಹಾಗೆಯೇ ‘ಹಲೋ‘ ಅಂತ ಹೇಳುವ ಹುಡುಗಿಯ ದನಿ ಕೇಳಿಸಿತು. ಆದರೆ ಅಲ್ಲಿ ಯಾರೂ ಇರಲಿಲ್ಲ.. ಅಂತ ತನಗಾದ ಭಯಾನಕ ಅನುಭವ ಆ ಮಹಿಳೆ ಹೇಳಿದ್ಧಾಳೆ.
BIG NEWS: ಸಂಪುಟ ವಿಸ್ತರಣೆ ಬಗ್ಗೆ BSY ಮುಖ್ಯ ಮಾಹಿತಿ
ಇನ್ನು ಆ ಮನೆಗೆ ಹೋದಾಗಿನಿಂದ ಒಂದಿಲ್ಲ ಒಂದು ಭಯಾನಕ ಅನುಭವ ಆಗುತ್ತಲೇ ಇದೆ. ಕನ್ನಡಿಯಲ್ಲಿ ಅಸ್ಪಷ್ಟ ನೆರಳು, ಚಿತ್ರ-ವಿಚಿತ್ರ ದನಿ, ವ್ಯಕ್ತಿಗಳ ಕೂಗಾಟ, ಹೆಜ್ಜೆ ಸಪ್ಪಳ, ವಸ್ತುಗಳು ಬೀಳುವ ಶಬ್ದ, ಕೆಟ್ಟ ದುರ್ವಾಸನೆ ಇವೆಲ್ಲ ಇಲ್ಲಿ ಇರಲು ಸಾಧ್ಯವೇ ಆಗದಂತ ಪರಿಸ್ಥಿತಿ ನಿರ್ಮಾಣ ಮಾಡಿದೆ. ತನ್ನ ಗಂಡ ಹೊರಗೆ ಹೋದರಂತೂ ತನಗೆ ಈ ಮನೆಯಲ್ಲಿ ಒಬ್ಬಳೆ ಇರುವುದು ಅಸಾಧ್ಯ. ಇನ್ನೂ ತನ್ನ ಸಾಕು ನಾಯಿ ಸಹ ಊಟ ಮಾಡುವುದನ್ನ ಬಿಟ್ಟಿದೆ. ಇದೆಲ್ಲ ಭೂತ-ಪಿಶಾಚಿಯ ಪ್ರಕೋಪ. ಇದರಿಂದ ನನಗೆ ಹುಚ್ಚು ಹಿಡಿದಂತಾಗಿದೆ ಅಂತ ಆ ಮಹಿಳೆ ಹೇಳುತ್ತಿದ್ದಾಳೆ.
ಈ ವೈಜ್ಞಾನಿಕ ಯುಗದಲ್ಲಿ ದೆವ್ವ-ಭೂತ ಪಿಶಾಚಿಗಳ ಕಥೆ ನಂಬೋದು ಕಷ್ಟವಾದರೂ ಆಕೆ ಅನುಭವಿಸುತ್ತಿರೋ ಮಾನಸಿಕ ಯಾತನೆ ನೋಡ್ತಿದ್ರೆ ಸುಳ್ಳಾಗದೇ ಇದ್ದರೂ ಇರಬಹುದು ಅಂತ ನೆಟ್ಟಿಗರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ.