ಪಂಜಾಬ್, ಹರಿಯಾಣಾ ಹಾಗೂ ಉತ್ತರ ಪ್ರದೇಶದ ರೈತರು ಹಮ್ಮಿಕೊಂಡಿರುವ ಪ್ರತಿಭಟನೆಗಳ ಪರ-ವಿರೋಧದ ಮಾತುಗಳ ಆನ್ಲೈನ್ ಜಿದ್ದಾಜಿದ್ದಿ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ರೈತರ ಪ್ರತಿಭಟನೆಯ ವೇಳೆ ನಡೆದ ಕೆಲವೊಂದು ಘಟನೆಗಳನ್ನು ಪ್ರಶ್ನಿಸಿ, ದೇಶದ ಸಾರ್ವಭೌಮತೆಯೇ ಅಂತಿಮ ಎಂದು ಟ್ವೀಟ್ ಮಾಡಿದ ಕ್ರಿಕೆಟ್ ಹಾಗೂ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಭಾರೀ ಸುದ್ದಿ ಮಾಡಿದ್ದಾರೆ.
ಖೋಡೇಸ್ ಗ್ರೂಪ್ ಗೆ ಐಟಿ ಶಾಕ್: 15ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ
ಇದೀಗ ಈ ಸೆಲೆಬ್ರಿಟಿಗಳನ್ನು ಬಹಿಷ್ಕರಿಸಿರುವ ಅಮೆರಿಕನ್ ಸಿಖ್ ಸಂಘಟನೆ, ಈ ಕದನವನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಒಯ್ದಿದೆ. ಕ್ಯಾಲಿಫೋರ್ನಿಯಾದ ಫ್ರೆಸ್ನೋದಲ್ಲಿ ಸಭೆ ಸೇರಿದ ಈ ಅಮೆರಿಕದ ಸಿಖ್ ಸಂಘಟನೆಗಳು, “ರೈತರ ಪ್ರತಿಭಟನೆಗಳನ್ನು ವಿರೋಧಿಸಿದ ಭಾರತೀಯ ನಟರು ಹಾಗೂ ಕ್ರೀಡಾಪಟುಗಳನ್ನು ಅಮೆರಿಕಾದ್ಯಂತ ಬಹಿಷ್ಕರಿಸಲಾಗುವುದು” ಎಂದಿವೆ.
ಅಮೆರಿಕದಲ್ಲಿ ಈ ಸೆಲೆಬ್ರಿಟಿಗಳನ್ನು ಬೆಂಬಲಿಸುವ ಯಾವುದೇ ಪ್ರಮೋಟರ್‌ಗೆ ತಮ್ಮಿಂದ ಭಾರೀ ವಿರೋಧ ಎದುರಿಸಬೇಕಾಗುತ್ತದೆ ಎಂದಿರುವ ಈ ಸಂಘಟನೆಗಳು, ಕೃಷಿ ಸುಧಾರಣೆ ಸಂಬಂಧ ಭಾರತ ಸರ್ಕಾರ ತಂದಿರುವ ಕಾಯಿದೆಗಳನ್ನು ಹಿಂಪಡೆಯುವವರೆಗೂ ತಮ್ಮ ಬೆಂಬಲವನ್ನು ರೈತರಿಗೆ ಕೊಡುವುದಾಗಿ ಅಮೆರಿಕನ್ ಸಿಖ್ ಸಂಘಟನೆಗಳು ಘೋಷಿಸಿವೆ.