alex Certify ಭಾರತೀಯ ಮದುವೆಯಲ್ಲಿ ಅಮೆರಿಕನ್ ; ಡ್ಯಾನ್ಸ್ ಫ್ಲೋರ್‌ನಲ್ಲಿ ಮಿಂಚಿನ ಕುಣಿತ | Watch Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಮದುವೆಯಲ್ಲಿ ಅಮೆರಿಕನ್ ; ಡ್ಯಾನ್ಸ್ ಫ್ಲೋರ್‌ನಲ್ಲಿ ಮಿಂಚಿನ ಕುಣಿತ | Watch Video

ಭಾರತೀಯ ಸಂಸ್ಕೃತಿಯ ವೈಭವವನ್ನು ಕಣ್ತುಂಬಿಕೊಳ್ಳಲು ಬಂದ ಅಮೆರಿಕನ್ ವ್ಲಾಗರ್ ಜ್ಯಾಕ್ ರೋಸೆಂತಾಲ್, ಅದೃಷ್ಟದ ಕಾರಣಕ್ಕೆ ಭಾರತೀಯ ಮದುವೆಯಲ್ಲಿ ಭಾಗವಹಿಸುವ ಅವಕಾಶ ಪಡೆದರು. ದೆಹಲಿಯಲ್ಲಿ ಟುಕ್-ಟುಕ್ ಓಡಿಸುತ್ತಿದ್ದ ಚಾಲಕನಿಂದ ಅವರಿಗೆ ಮದುವೆಯ ಆಹ್ವಾನ ಸಿಕ್ಕಿತ್ತು.

ದೆಹಲಿಯ ರಸ್ತೆಗಳಲ್ಲಿ ಸುತ್ತಾಡುತ್ತಿದ್ದ ಜ್ಯಾಕ್ ರೋಸೆಂತಾಲ್, ಭಾರತೀಯ ಮದುವೆಯ ಅನುಭವ ಪಡೆಯುವ ಬಯಕೆಯನ್ನು ಟುಕ್-ಟುಕ್ ಚಾಲಕನ ಬಳಿ ವ್ಯಕ್ತಪಡಿಸಿದ್ದು, ಅಚ್ಚರಿಯೆಂದರೆ, ಆ ಚಾಲಕನ ಸೋದರ ಸಂಬಂಧಿಯ ಮದುವೆ ಕೆಲವೇ ದಿನಗಳಲ್ಲಿತ್ತು. ಚಾಲಕ ಜ್ಯಾಕ್ ರೋಸೆಂತಾಲ್ ಅವರನ್ನು ಮದುವೆಗೆ ಆಹ್ವಾನಿಸಿದ್ದಾನೆ.

ಜ್ಯಾಕ್ ರೋಸೆಂತಾಲ್ ಈ ಅವಕಾಶವನ್ನು ಕೈಚೆಲ್ಲಲು ಬಯಸದೆ, ತಮ್ಮ ಪ್ರಯಾಣದ ಯೋಜನೆಯನ್ನು ಬದಲಾಯಿಸಿ ಮದುವೆಯಲ್ಲಿ ಭಾಗವಹಿಸಿ ಡ್ಯಾನ್ಸ್ ಮಾಡಿದ್ದು, ಮೆಹಂದಿ ಹಾಕಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ಆನಂದಿಸಿದ್ದಾರೆ.

ಜ್ಯಾಕ್ ರೋಸೆಂತಾಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯ ಆತಿಥ್ಯಕ್ಕೆ ಅವರು ಮನಸೋತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

View this post on Instagram

 

A post shared by Jack Rosenthal (@jackrosen6)

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...