ನವದೆಹಲಿ: ಅಮೆರಿಕಾದ ಗಾಯಕ ಟೋಬಿ ಕೀತ್ (62) ಕ್ಯಾನ್ಸರ್ ನಿಂದ ಸೋಮವಾರ ನಿಧನರಾದರು.
ಜನಪ್ರಿಯ ಸಂಗೀತಗಾರ ಟೋಬಿ ಕೀತ್ ಹೊಟ್ಟೆಯ ಕ್ಯಾನ್ಸರ್ ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು.
ಕುಟುಂಬ ಸದಸ್ಯರ ಪ್ರಕಾರ, ಜೂನ್ 2022 ರಲ್ಲಿ ಅವರಿಗೆ ಹೊಟ್ಟೆಯ ಕ್ಯಾನ್ಸರ್ ಇರುವುದು ಪತ್ತೆಯಾಯಿತು ಮತ್ತು ಅವರ ಕ್ಯಾನ್ಸರ್ ಗೆ ಕೀಮೋಥೆರಪಿ, ವಿಕಿರಣ ಮತ್ತು ಶಸ್ತ್ರಚಿಕಿತ್ಸೆಯನ್ನು ಪಡೆಯಲು ಪ್ರಾರಂಭಿಸಿದರು. ತಜ್ಞರ ಪ್ರಕಾರ, ಹೊಟ್ಟೆಯ ಕ್ಯಾನ್ಸರ್ ಅನ್ನು ಪತ್ತೆಹಚ್ಚುವುದು ತುಂಬಾ ಕಷ್ಟವಂತೆ.
ಆಸಿಡ್ ರಿಫ್ಲಕ್ಸ್ ಮತ್ತು ಕಿಬ್ಬೊಟ್ಟೆ ನೋವು ಹೊಟ್ಟೆಯ ಕ್ಯಾನ್ಸರ್ ನ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ.
ಇದನ್ನು ಪತ್ತೆ ಹಚ್ಚಲು ಜಿಐ ಎಂಡೋಸ್ಕೋಪಿ ಅಗತ್ಯವಿದೆ. ತೂಕ ನಷ್ಟ ಮತ್ತು ಹಸಿವು ಕಡಿಮೆಯಾಗುವುದು ಹೊಟ್ಟೆಯ ಕ್ಯಾನ್ಸರ್ ನ ಸಾಮಾನ್ಯ ಲಕ್ಷಣಗಳಾಗಿವೆ.
ಹೊಟ್ಟೆಯ ಕ್ಯಾನ್ಸರ್ ನ ಇತರೆ ಲಕ್ಷಣಗಳು..
ವಾಕರಿಕೆ
ರಕ್ತದೊಂದಿಗೆ ವಾಂತಿ
ಹಸಿವಿನಲ್ಲಿ ಬದಲಾವಣೆ
ಕಿಬ್ಬೊಟ್ಟೆಯ ಊತ
ಎದೆಯುರಿ
ಅಜೀರ್ಣ
ಹೊಟ್ಟೆ ನೋವು
ಚಿಕಿತ್ಸೆ ಹೇಗೆ..?
ಈ ಕ್ಯಾನ್ಸರ್ ಗೆ ಕೀಮೋಥೆರಪಿ, ಸೂಪರ್-ಮೇಜರ್ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಮತ್ತು ಕೆಲವೊಮ್ಮೆ ಟಾರ್ಗೆಟೆಡ್ ಥೆರಪಿ ಕೂಡ ಮಾಡಲಾಗುತ್ತಿದೆ. ಹೊಟ್ಟೆಯ ಕ್ಯಾನ್ಸರ್ ವೇಗವಾಗಿ ಬೆಳೆಯುತ್ತಿರುವ ಗೆಡ್ಡೆಯಾಗಿದೆ ಮತ್ತು ದೇಹದ ಇತರ ಭಾಗಗಳಿಗೆ ತ್ವರಿತವಾಗಿ ಹರಡುತ್ತದೆ. ಇದು ಚಿಕಿತ್ಸೆ ಪ್ರಾರಂಭಿಸಲು ಹೆಚ್ಚು ಸಮಯವನ್ನು ಕೂಡ ನೀಡುವುದಿಲ್ಲ.