alex Certify ಬಲು ಅಪರೂಪದ ಅಮೆರಿಕನ್ ಬಾರ್ನ್ ಗೂಬೆ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲು ಅಪರೂಪದ ಅಮೆರಿಕನ್ ಬಾರ್ನ್ ಗೂಬೆ ರಕ್ಷಣೆ

American Barn Owl, Rarely Found in India, Spotted in Bihars Supaulಸುಪೌಲ್: ಬಿಹಾರದ ಸುಪೌಲ್‌ನಲ್ಲಿ ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳು ಅಮೆರಿಕನ್ ಬಾರ್ನ್ ಗೂಬೆಯನ್ನು ರಕ್ಷಿಸಿದ್ದಾರೆ.

ಈ ಅಪರೂಪದ ಗೂಬೆಯು ಸಾಮಾನ್ಯವಾಗಿ ಯುಎಸ್, ಇಂಗ್ಲೆಂಡ್ ಮತ್ತು ಯುರೋಪ್ ದೇಶಗಳ ಕೆಲವು ಭಾಗಗಳಲ್ಲಿ ಕಂಡು ಬರುತ್ತದೆ. ಭಾರತದಲ್ಲಿ ಬಹಳ ವಿರಳವಾಗಿ ಕಂಡು ಬರುತ್ತದೆ. ತ್ರಿವೇಣಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ದಪರಾಖಾ ಗ್ರಾಮದಲ್ಲಿ ಅಮೆರಿಕನ್ ಬಾರ್ನ್ ಗೂಬೆಯ ಬಗ್ಗೆ ಮಾಹಿತಿ ಪಡೆದಿರುವುದಾಗಿ ಸುಪಾಲ್ ಡಿಎಫ್‌ಒ ಸುನಿಲ್ ಕುಮಾರ್ ಶರಣ್ ಹೇಳಿದ್ದಾರೆ.

ದಪರಾಖಾ ಗ್ರಾಮದ ರಾಹುಲ್ ಕುಮಾರ್ ಎಂಬುವವರ ಮನೆಯಲ್ಲಿ ಈ ಅಪರೂಪದ ಹಕ್ಕಿ ಪತ್ತೆಯಾಗಿದೆ. ಸತ್ತ ಪಕ್ಷಿ ಬಳಿ ಕಾಗೆಗಳ ಗುಂಪಿನ ನಡುವೆ ಇದ್ದ ಗೂಬೆಯನ್ನು ರಾಹುಲ್ ಗಮನಿಸಿದ್ದಾರೆ. ಬಳಿಕ ಅವರು ಅದನ್ನು ರಕ್ಷಿಸಿ, ಅರಣ್ಯಾಧಿಕಾರಿಗಳು ಬರುವವರೆಗೂ ಪಂಜರದಲ್ಲಿ ಇರಿಸಿದ್ದರು.

ಇದು ಅಪರೂಪದ ಪಕ್ಷಿಯಾಗಿದ್ದು, ಇದಕ್ಕೆ  ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಇದು ಸಾಮಾನ್ಯವಾಗಿ ಕಡಿಮೆ ತಾಪಮಾನವಿರುವ ದೇಶಗಳಲ್ಲಿ ಕಂಡುಬರುತ್ತದೆ.

ಭಾರತದಲ್ಲಿ ದೀಪಾವಳಿಯ ಸಮಯದಲ್ಲಿ ಅನೇಕ ಜನರು ಈ ಅಪರೂಪದ ಗೂಬೆಯನ್ನು ಖರೀದಿಸುತ್ತಾರೆ. ಇದನ್ನು ಅದೃಷ್ಟದ ಹಕ್ಕಿ ಎಂದು ಕೂಡ ಕರೆಯುತ್ತಾರೆ, ಇದು ಮನೆಗೆ ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಜನರಲ್ಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...