ಎರಡು ದಶಕಗಳ ಹಿಂದೆ ಚಿತ್ರರಂಗದಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದು ಕಹೋ ನಾ ಪ್ಯಾರ್ ಹೈ ಹಿಂದಿ ಚಿತ್ರ. ಹೃತಿಕ್ ರೋಷನ್ ಈ ಚಿತ್ರದ ಮೂಲಕವೇ ಬಹಳಷ್ಟು ಖ್ಯಾತಿ ಪಡೆದಿದ್ದರು.
22 ವರ್ಷದ ಹಿಂದಿನ ಚಿತ್ರದ ಬಗ್ಗೆ ಈಗೇಕೆ ಪೀಠಿಕೆ ಎಂದಿರಾ? ಈ ಚಿತ್ರದ ನಟಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಹೃತಿಕ್ ರೋಷನ್‌ಗೆ ನಾಯಕಿಯಾಗಿ ನಟಿಸಿ ಜನರ ಮನಗೆದ್ದಿದ್ದ ಖ್ಯಾತ ನಟಿ ಅಮೀಶಾ ಪಟೇಲ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಆಕೆಯ ವಿರುದ್ಧ ಕಾರ್ಯಕ್ರಮವೊಂದರ ಸಂಘಟಕರು ಅಸಮಾಧಾನಗೊಂಡಿದ್ದು, ಸಾಮಾಜಿಕ ಕಾರ್ಯಕರ್ತ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೀಶಾ ಪಟೇಲ್ ಪ್ರದರ್ಶನ ನೀಡಿದರು. ಬಳಿಕ ಟ್ವೀಟ್ ಮಾಡಿ ಕಾರ್ಯಕ್ರಮ ನಡೆದ ಸ್ಥಳ ಸೇಫ್ ಇರಲಿಲ್ಲ, ಸೂಕ್ತ ರಕ್ಷಣೆ ನೀಡಿದ ಸ್ಥಳೀಯ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದರು.
ಅಕಾಲಿಕ ಮುಪ್ಪನ್ನು ತಡೆಯುತ್ತೆ ಜಪಾನಿಯರ ಈ ಸಿಕ್ರೇಟ್ ಫೇಸ್ಪ್ಯಾಕ್…!
ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಸುನೀಲ್ ಜೈನ್ ಎಂಬಾತ ಆಕೆ ವಿರುದ್ಧ ವಂಚನೆ ದೂರು ದಾಖಲಿಸಿದ್ದು, ಅಮೀಶಾ ಕಾರ್ಯಕ್ರಮಕ್ಕಾಗಿ ಭಾರಿ ಮೊತ್ತ ವಸೂಲಿ ಮಾಡಿದ್ದಾರೆ. ಆದರೆ ಕೇವಲ ವೇದಿಕೆಯಲ್ಲಿ ಕಡಿಮೆ ಅವಧಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಕೆ ರಾತ್ರಿ 9.30ರ ಸುಮಾರಿಗೆ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ್ದ ವೇದಿಕೆಗೆ ಆಗಮಿಸಿದ್ದರು. ಒಂದು ಗಂಟೆ ಪ್ರದರ್ಶನ ನೀಡಬೇಕಿತ್ತು, ಆದರೆ
ಕೇವಲ 3 ನಿಮಿಷ ಪ್ರದರ್ಶನ ನೀಡಿ ಇಂದೋರ್‌ಗೆ ತೆರಳಿದರು.
ಈ ಮಧ್ಯೆ ಈ ಕಾರ್ಯಕ್ರಮ ಕುರಿತು ಅಮೀಶಾ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹೇಳಿಕೆ ನೀಡಿ, ಏಪ್ರಿಲ್ 23ರಂದು ಮಧ್ಯಪ್ರದೇಶದ ಖಾಂಡ್ವಾ ನಗರದಲ್ಲಿ ನವಚಂಡಿ ಮಹೋತ್ಸವ್ 2022ರಲ್ಲಿ ಭಾಗವಹಿಸಿದ್ದೆ. ಸ್ಟಾರ್ ಫ್ಲ್ಯಾಶ್ ಎಂಟರ್‌ಟೈನ್‌ಮೆಂಟ್ ಹಾಗೂ ಅರವಿಂದ್ ಪಾಂಡೆ ಅತೀ ಕೆಟ್ಟದಾಗಿ ವ್ಯವಸ್ಥೆ ಮಾಡಿದ್ದರು. ನನ್ನ ಜೀವದ ಬಗ್ಗೆ ನನಗೆ ಭಯವಿತ್ತು ಆದರೆ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ಸ್ಥಳೀಯ ಪೊಲೀಸರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ನಟಿ ಟ್ವೀಟಿಸಿದ್ದರು.
ಮೊಘತ್ ಪೊಲೀಸ್ ಠಾಣೆಯ ಪ್ರಭಾರಿ ಈಶ್ವರ್ ಸಿಂಗ್ ಚೌಹಾಣ್ ಹೇಳಿಕೆ ನೀಡಿ, ಚಿತ್ರನಟಿ ಅಮೀಶಾ ಪಟೇಲ್ ಅವರ ಕಾರ್ಯಕ್ರಮದ ದಿನದಂದು ನಾನು ಸಹ ಅಲ್ಲಿದ್ದೆ. ಖಂಡಿತವಾಗಿಯೂ ಜನರ ದೊಡ್ಡ ಗುಂಪಾಗಿತ್ತು, ಆದರೆ ಯಾವುದೇ ಅಸಭ್ಯತೆ ಇರಲಿಲ್ಲ. ಬೇರೆ ಯಾವುದೇ ರೀತಿಯ ಆತಂಕದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದಿದ್ದಾರೆ.