ದಾರಿಯ ಮಧ್ಯೆ ಅಥವಾ ನೀರವ ರಾತ್ರಿಯಲ್ಲಿ ಅಲ್ಲೆಲ್ಲೋ ದೂರ ಆಂಬುಲೆನ್ಸ್ ಬರುತ್ತಿದ್ದರೆ, ಅದರ ಸದ್ದಿಗೆ ಒಮ್ಮೆ ಬೆಚ್ಚುತ್ತೇವೆ. ಅದರ ಸದ್ದೇ ಹಾಗೆ, ಮನಸ್ಸು ವಿಚಲಿತ ಮಾಡುತ್ತದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಇನ್ಮುಂದೆ ಈ ಬೆಚ್ಚಿ ಬೀಳಿಸುವ ಶಬ್ದದ ಬದಲಾಗಿ ಕೊಳಲು, ಹಾರ್ಮೋನಿಯಂ, ತಬಲಾ ಅಥವಾ ಶಂಖನಾದದ ಧ್ವನಿ ಸೇರಿಸಬೇಕೆಂದು ಪ್ರಸ್ತಾಪಿಸಿದ್ದಾರೆ.
ವಾಹನಗಳ ಕರ್ಕಶ ಹಾರನ್ ಬದಲಾಯಿಸುವ ಪ್ರಸ್ತಾಪದ ಕುರಿತು ಕೆಲ ವಾರಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದರು. ಈಗ ಆಂಬ್ಯಲೆನ್ಸ್ ಸೈರನ್ ಬಗ್ಗೆ ಮಾತನಾಡಿದ್ದಾರೆ.
BIG NEWS: ಐದು ಲಕ್ಷ ಮಹಿಳೆಯರಿಗೆ ಸಿಗಲಿದೆ ಉಚಿತ ಎಲ್ಪಿಜಿ ಸಂಪರ್ಕ
ವಾಹನ ಹಾರನ್ ಬದಲಾವಣೆ ಬಗ್ಗೆ ಕೇಂದ್ರದ ಪ್ರಸ್ತಾಪಕ್ಕೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಹಾಸ್ಯ ಮಾಡಿದ್ದರು. ಮತ್ತೆ ಕೆಲವರು ಸರಿಯಾದ ನಿರ್ಧಾರ ಎಂದಿದ್ದರು. ಇದೀಗ ಆಂಬುಲೆನ್ಸ್ ಹಾರನ್ ಬದಲಾವಣೆ ಪ್ರಸ್ತಾಪವನ್ನು ಜನ ಯಾವ ರೀತಿ ಸ್ವೀಕರಿಸುತ್ತಾರೆ ಕಾದು ನೋಡಬೇಕು.
ಗಡ್ಕರಿ ಅವರ ಪ್ರಕಾರ, ಬೆಚ್ಚಿಬೀಳಿಸುವ ಶಬ್ದವನ್ನು ಸಂಗೀತಮಯ ಮಾಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ದೆಹಲಿ-ಮುಂಬೈ ಹೆದ್ದಾರಿ ಕಾಮಗಾರಿ ತಪಾಸಣೆ ಮಾಡುವಾಗ ತಿಳಿಸಿದ್ದಾರೆ.
ಇನ್ನು ದೆಹಲಿ-ಮುಂಬೈ ಕುರಿತಂತೆ ವಿವರಣೆ ನೀಡಿದ್ದು, ಇದೊಂದು ಹಸಿರು ಮಾರ್ಗವಾಗಿದ್ದು, ಈ ಹೆದ್ದಾರಿಯ ಎರಡು ಬದಿಯಲ್ಲಿ ಸುಮಾರು ನಾಲ್ಕು ಕೋಟಿ ಮರ ಬೆಳೆಸುವ ಯೋಜನೆಯಿದೆ ಎಂದು ತಿಳಿಸಿದ್ದಾರೆ.
ವಾಯುಮಾಲಿನ್ಯದ ಬಗ್ಗೆ ಹೆಚ್ಚು ಒತ್ತು ಕೊಡಲಾಗಿದೆ ಎಂದಿರುವ ಅವರು ಈ ಹೆದ್ದಾರಿ ನಿರ್ಮಿಸಲು ಅಂದಾಜು 90 ಸಾವಿರ ಕೋಟಿ ರೂಪಾಯಿ ವೆಚ್ಚವಾಗಿದೆ.