alex Certify ‘ಅಂಬಿ ಅಮರ, ಸ್ವರ್ಗದಲ್ಲೂ ಸುಖವಾಗಿರಿ’ : ಅಂಬರೀಷ್ ಹುಟ್ಟು ಹಬ್ಬಕ್ಕೆ ಸುಮಲತಾ ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಂಬಿ ಅಮರ, ಸ್ವರ್ಗದಲ್ಲೂ ಸುಖವಾಗಿರಿ’ : ಅಂಬರೀಷ್ ಹುಟ್ಟು ಹಬ್ಬಕ್ಕೆ ಸುಮಲತಾ ಪೋಸ್ಟ್

ಬೆಂಗಳೂರು : ಹಿರಿಯ ನಟ ಅಂಬರೀಶ್ ಅವರ ಹುಟ್ಟುಹಬ್ಬವನ್ನು ಅವರ ಕುಟುಂಬದವರು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಅಂಬಿ ಸಮಾಧಿ ಬಳಿ ಆಚರಿಸಿದರು. ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಹಿರಿಯ ನಟ ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸುಮಲತಾ ಅಂಬರೀಷ್ ಪೋಸ್ಟ್ ಮಾಡಿದ್ದಾರೆ.

‘’ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣವನ್ನು ನೆನೆಸಿಕೊಂಡಾಗ ಮುಗುಳು ನಗೆ ಮೂಡುತ್ತದೆನಿಮ್ಮ ಅಗಲಿಕೆಯ ಬಗ್ಗೆ ನೆನೆದಾಗಲೆಲ್ಲ ನೋವುಂಟಾಗುತ್ತದೆ. ಆದರೆ ನೀವು ಎಂದೆಂದಿಗೂ ನಮ್ಮೊಂದಿಗೇ ಇದ್ದೀರಿ, ಅನುಕ್ಷಣವೂ ಅನುದಿನವೂ ನೀವೇ ನಮ್ಮ ಜೀವನ…ಅಂಬಿ ಅಮರ… ಸ್ವರ್ಗದಲ್ಲೂ ಸುಖವಾಗಿರಿ ಎಂದು ಜನ್ಮದಿನದಂದು ಪ್ರೀತಿಯ ಶುಭ ಹಾರೈಕೆಗಳು’’ ಎಂದು ಸುಮಲತಾ ಅಂಬರೀಷ್ ಪೋಸ್ಟ್ ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...