
ಅಕ್ರಮವಾಗಿ ತಿಮಿಂಗಿಲ ವಾಂತಿ(ಅಂಬರ್ ಗ್ರೀಸ್) ಮಾರಾಟಕ್ಕೆ ಯತ್ನಿಸಿದ ಒಬ್ಬನನ್ನು ತುಮಕೂರು ಜಿಲ್ಲೆ ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಬಂಧಿಸಲಾಗಿದೆ.
ತಿಪಟೂರು ತಾಲೂಕಿನ ಕಡೆಹಳ್ಳಿ ಗ್ರಾಮದ ವಿರೂಪಾಕ್ಷಿಗೌಡ ಬಂಧಿತ ಆರೋಪಿಯಾಗಿದ್ದಾನೆ. ಆತ 15 ಲಕ್ಷ ರೂಪಾಯಿ ಮೌಲ್ಯದ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸಿದ್ದ. ಮಫ್ತಿಯಲ್ಲಿದ್ದ ಕೇರಳ ಪೊಲೀಸರಿಗೆ ಮಾರಾಟಕ್ಕೆ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸಿದ್ದು, ಆರೋಪಿ ಬಂಧನದ ಬಗ್ಗೆ ಕೇರಳ ರಾಜ್ಯದ ಪೊಲೀಸರಿಂದ ಮಾಹಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.