ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಅಮೆಜಾನ್ ಗೆ ನೊಟೀಸ್ ಜಾರಿಯಾಗಿದೆ. ಸಿಖ್ಖರ ಪವಿತ್ರ ಪುಸ್ತಕ, ಗುರು ಗ್ರಂಥ ಸಾಹಿಬ್ ಹಾಗೂ ಗುತ್ಕಾ ಸಾಹಿಬ್ ಪುಸ್ತಕವನ್ನು ಆನ್ಲೈನ್ ನಲ್ಲಿ ಮಾರಾಟ ಮಾಡಿದ ಕಾರಣ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ನೊಟೀಸ್ ಜಾರಿಗೊಳಿಸಿದೆ.
ಇ-ಕಾಮರ್ಸ್ ದೈತ್ಯ ಅಮೆಜಾನ್‌ಗೆ ಸಮಿತಿ ಕಾನೂನು ನೋಟಿಸ್ ಕಳುಹಿಸಿದೆ ಎಂದು ಎಸ್‌ಜಿಪಿಸಿ ಮುಖ್ಯ ಕಾರ್ಯದರ್ಶಿ ಹರ್ಜಿಂದರ್ ಸಿಂಗ್ ಧಾಮಿ ಹೇಳಿದ್ದಾರೆ. ಪವಿತ್ರ ವಚನಗಳ ಸಂಗ್ರಹವಾದ ಗುತ್ಕಾ ಸಾಹಿಬ್ ಆನ್‌ಲೈನ್ ಮಾರಾಟದಿಂದ ಕೋಪಗೊಂಡಿದ್ದೇನೆ ಎಂದವರು ಹೇಳಿದ್ದಾರೆ. ಅಮೆಜಾನ್ ಸಿಖ್ ಧರ್ಮದ ತತ್ವಗಳನ್ನು ಉಲ್ಲಂಘಿಸಿದೆ.
ಸಿಖ್ ಸಮುದಾಯಕ್ಕೆ ಅಪಾರ ಗೌರವದ ಭಾವವಿದೆ. ಅಮೆಜಾನ್ ನಲ್ಲಿ ಈ ಪುಸ್ತಕ ಮಾರಾಟ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಎರಡು ಪುಸ್ತಕಗಳನ್ನು ವೆಬ್ಸೈಟ್ ನಿಂದ ತೆಗೆದುಹಾಕಬೇಕೆಂದು ಅವರು ಹೇಳಿದ್ದಾರೆ. ಒಂದು ವೇಳೆ ವೆಬ್ಸೈಟ್ ನಿಂದ ಇದನ್ನು ತೆಗೆದು ಹಾಕದೆ ಹೋದಲ್ಲಿ ಕಾನೂನು ಕ್ರಮಕೈಗೊಳ್ಳುವುದಾಗಿ ಎಸ್ಜಿಪಿಸಿ ಎಚ್ಚರಿಕೆ ನೀಡಿದೆ.