ಆನ್ಲೈನ್ ಶಾಪಿಂಗ್ ಮಾಡುವವರ ಅಚ್ಚುಮೆಚ್ಚಿನ ವೆಬ್ಸೈಟ್ ಗಳಲ್ಲಿ ಅಮೆಜಾನ್ ಕೂಡ ಒಂದು. ಅಮೆಜಾನ್ ನಲ್ಲಿ ಅನೇಕ ವಸ್ತುಗಳು, ರಿಯಾಯಿತಿ ದರದಲ್ಲಿ ಸಿಗುತ್ತೆ. ಆದ್ರೆ ಅಮೆಜಾನ್ ವೆಬ್ಸೈಟ್ ಗಿಂತ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿ ಮಾಡಬಹುದು.
ಅದೂ ಅಮೆಜಾನ್ ರಹಸ್ಯ ವೆಬ್ಸೈಟ್ ನಲ್ಲಿ. ಯಸ್, 7 ಸಾವಿರ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಕೇವಲ 2 ಸಾವಿರ ರೂಪಾಯಿಗೆ ಖರೀದಿಸಬಹುದು.
ಅಮೆಜಾನ್ ರಹಸ್ಯ ವೆಬ್ಸೈಟ್ ಹೆಸರು ಅಮೆಜಾನ್ ವೇರ್ ಹೌಸ್. ಇದ್ರಲ್ಲಿ ಗ್ರಾಹಕರು ಸಾವಿರಾರು ರೂಪಾಯಿಗಳನ್ನು ಉಳಿಸಬಹುದು. ಎಲ್ಲಾ ರೀತಿಯ ವಸ್ತುಗಳು ಇಲ್ಲಿ ಕಡಿಮೆ ಬೆಲೆಗೆ ಸಿಗುತ್ವೆ.
ಅಮೆಜಾನ್‌ನ ಈ ರಹಸ್ಯ ವೆಬ್‌ಸೈಟ್, ಅದರ ಮುಖ್ಯ ವೇದಿಕೆಯಂತೆ, ತನ್ನ ಗ್ರಾಹಕರಿಗೆ ಅನೇಕ ಆಫರ್ ನೀಡುತ್ತದೆ. ಖರೀದಿಸಿದ ಉತ್ಪನ್ನ ಇಷ್ಟವಾಗದಿದ್ದರೆ, ಅದನ್ನು ಹಿಂದಿರುಗಿಸಲು 30 ದಿನಗಳ ಅವಕಾಶವಿದೆ.
ಆದ್ರೆ ಬೇಸರದ ವಿಷ್ಯವೆಂದ್ರೆ ಈ ವೆಬ್ಸೈಟ್ ನಲ್ಲಿ ಸಿಗುವ ಉತ್ಪನ್ನಗಳು ಹೊಸದಲ್ಲ. ಸೆಕೆಂಡ್ ಹ್ಯಾಂಡ್. 40 ಸಾವಿರಕ್ಕೂ ಹೆಚ್ಚು ವಸ್ತುಗಳು ನಿಮಗೆ ಸಿಗುತ್ತವೆ. ಎಲ್ಲ ಉತ್ಪನ್ನ ಸರಿಯಾಗಿ ಕೆಲಸ ಮಾಡುತ್ತಾ ಎಂಬುದನ್ನು ನೀವು ಪರೀಕ್ಷಿಸಿಕೊಳ್ಳಬೇಕು.