ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿ ಅಮೆಜಾನ್ ವಿಶೇಷ ಕಾರ್ಯಕ್ರಮವನ್ನು ಶುರು ಮಾಡಿದೆ. ಅಮೆಜಾನ್ ಮಹಿಳಾ ಸಬಲೀಕರಣಕ್ಕಾಗಿ ಅಮೆಜಾನ್ ಸಹೇಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಮಹಿಳೆಯರನ್ನು ವ್ಯಾಪಾರದ ಜೊತೆ ಸಂಪರ್ಕಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಅಮೆಜಾನ್ ಉದ್ದೇಶವಾಗಿದೆ. ವ್ಯಾಪಾರ ಶುರು ಮಾಡಲು ಬಯಸುವ ಮಹಿಳೆಯರು ಅಥವಾ ಈಗಾಗಲೇ ಶುರು ಮಾಡಿರುವ ವ್ಯಾಪಾರವನ್ನು ಯಶಸ್ವಿಗೊಳಿಸಲು ಬಯಸುವ ಮಹಿಳೆಯರು ಅಮೆಜಾನ್ ಜೊತೆ ಕೈಜೋಡಿಸಬಹುದು.
ಅಮೆಜಾನ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಮಹಿಳಾ ಉದ್ಯಮಿ, ಅಮೆಜಾನ್ ಮಾರಾಟಗಾರರಾಗಿದ್ದರೆ, ತನ್ನ ಉತ್ಪನ್ನವನ್ನು ಮಾರಾಟ ಮಾಡಲು ಬಯಸಿದರೆ ಅಥವಾ ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವ ಎನ್‌ಜಿಒ ಹೊಂದಿದ್ದರೆ, ಅಮೆಜಾನ್‌ನ ಸಹೇಲಿ ಕಾರ್ಯಕ್ರಮಕ್ಕೆ ಸೇರಬಹುದು.
ಅಮೆಜಾನ್ ತನ್ನ ವೆಬ್‌ಸೈಟ್‌ನಲ್ಲಿ ವುಮನ್ ಸಹೇಲಿ ಗಾಗಿ 1.40 ನಿಮಿಷಗಳ ವಿಡಿಯೋ ಜಾಹೀರಾತನ್ನು ನೀಡಿದೆ. ಇದರಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಉತ್ಪನ್ನವನ್ನು ಸ್ವತಃ ತಯಾರಿಸುವ ಮಹಿಳೆಯರಿಗೆ ಮಾತ್ರ ಅಥವಾ ಅವರ ತಂಡವು ಅದನ್ನು ಮಾಡುತ್ತಿದ್ದರೆ ಅವರಿಗೆ ಮಾತ್ರ ಇದ್ರಲ್ಲಿ ಸೇರುವ ಅವಕಾಶ ನೀಡಲಾಗ್ತಿದೆ.
ಅಮೆಜಾನ್ ಸಹೇಲಿ ಕಾರ್ಯಕ್ರಮಕ್ಕಾಗಿ ಕಂಪನಿಯ ನೋಂದಣಿ, ಬ್ಯಾಂಕ್ ಖಾತೆ ಮತ್ತು ಜಿಎಸ್ಟಿ ಸಂಖ್ಯೆಯನ್ನು ಹೊಂದಿರಬೇಕು. ಇದಲ್ಲದೆ ಕೆವೈಸಿ ಡಾಕ್ಯುಮೆಂಟ್ ಅನ್ನು ನವೀಕರಿಸುವುದು ಕಡ್ಡಾಯವಾಗಿದೆ. ಅಮೆಜಾನ್ ಸಹೇಲಿ ಕಾರ್ಯಕ್ರಮದಡಿ ಇನ್ನೂ ಅನೇಕ ಪ್ರಯೋಜನಗಳು ಲಭ್ಯವಿದೆ. ಸಾಮಾನ್ಯ ಜನರು ಉತ್ಪನ್ನವನ್ನು ಅಮೆಜಾನ್‌ನ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡಿದರೆ, ಕಂಪನಿಗೆ ಶೇಕಡಾ 20 ವರೆಗೆ ಕಮಿಷನ್ ನೀಡಬೇಕಾಗುತ್ತದೆ. ಸಹೇಲಿ ಕಾರ್ಯಕ್ರಮಕ್ಕೆ ಸೇರ್ಪಡೆಗೊಂಡಾಗ ಕಂಪನಿಗೆ ಶೇಕಡಾ 12ರಷ್ಟು ಕಮಿಷನ್ ಪಾವತಿಸಬೇಕಾಗುತ್ತದೆ. ಕಂಪನಿಯು ವೈಯಕ್ತಿಕ ತರಬೇತಿಯನ್ನು ನೀಡುತ್ತದೆ. ಇದು ಮಹಿಳೆಯರಿಗೆ ವ್ಯಾಪಾರ ಮಾಡಲು ನೆರವಾಗಲಿದೆ.
ಸಹೇಲಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಮೊದಲು ಅಮೆಜಾನ್ ವೆಬ್‌ಸೈಟ್‌ಗೆ ಹೋಗಬೇಕು. ಆನ್‌ಲೈನ್ ಫಾರ್ಮ್ ಭರ್ತಿ ಮಾಡಬೇಕು. ಅಲ್ಲಿ ಆಪ್ಲೈನ್ ನೌವ್ ಮೇಲೆ ಕ್ಲಿಕ್ ಮಾಡಬೇಕು. ಅದ್ರಲ್ಲಿ ಮೂರು ಆಯ್ಕೆ ಕಾಣಿಸುತ್ತದೆ. ಅವುಗಳಲ್ಲಿ ಒಂದನ್ನು ಆರಿಸಿ. ಅಲ್ಲಿ ಹೆಸರು, ವ್ಯವಹಾರದ ಹೆಸರು, ಇಮೇಲ್ ವಿಳಾಸ, ಫೋನ್ ಸಂಖ್ಯೆ, ನಗರ, ರಾಜ್ಯ ಮುಂತಾದ ಎಲ್ಲಾ ಮಾಹಿತಿಯನ್ನು ನಮೂದಿಸಿ ಸಲ್ಲಿಸಬೇಕು.