ಅಮೆಜಾನ್ ಪ್ರೈಂ ವಿಡಿಯೋ ವೀಕ್ಷಕರಿಗೊಂದು ಖುಷಿ ಸುದ್ದಿಯಿದೆ. ಕೇವಲ 129 ರೂಪಾಯಿಗೆ ಅಮೆಜಾನ್ ಪ್ರೈಂ ವಿಡಿಯೋ ವೀಕ್ಷಣೆ ಮಾಡಬಹುದು. ಒಟಿಟಿ ಪ್ಲಾಟ್ಫಾರ್ಮ್ ಪ್ರೈಮ್ ವಿಡಿಯೋ, ಮಾಸಿಕ ಚಂದಾದಾರಿಕೆ ಯೋಜನೆಯನ್ನು ಪುನರಾರಂಭಿಸಿದೆ. ಈ ಯೋಜನೆಯಲ್ಲಿ ತಿಂಗಳಿಗೆ ಕೇವಲ 129 ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
ಅಮೆಜಾನ್ ಪ್ರೈಮ್ ವಿಡಿಯೋಗಾಗಿ 999 ರೂಪಾಯಿ ವಾರ್ಷಿಕ ಯೋಜನೆಯನ್ನು ಖರೀದಿಸಬೇಕಿತ್ತು. ಆದ್ರೀಗ ಅಮೆಜಾನ್ ತನ್ನ ಹಳೆ ಪ್ಲಾನ್ ಮತ್ತೆ ಶುರು ಮಾಡಿದೆ. 129 ರೂಪಾಯಿ ಖರ್ಚು ಮಾಡಿ, ಬಳಕೆದಾರರು ಒಂದು ತಿಂಗಳ ಕಾಲ ಮನರಂಜನೆ ಪಡೆಯಬಹುದು.
ಅಮೆಜಾನ್ ಪ್ರೈಂ ವಿಡಿಯೋ 3 ವಿಭಾಗಗಳ ಆಯ್ಕೆಯನ್ನು ಬಳಕೆದಾರರಿಗೆ ನೀಡಿದೆ. ತಿಂಗಳ ರಿಚಾರ್ಜ್ ಪ್ಲಾನ್ ಬೆಲೆ 129 ರೂಪಾಯಿ. ಬಳಕೆದಾರರು 3 ತಿಂಗಳ ಪ್ಲಾನ್ ಖರೀದಿ ಮಾಡಲು ಬಯಸಿದ್ದರೆ 329 ರೂಪಾಯಿ ಪಾವತಿ ಮಾಡಬೇಕು. ಒಂದು ವರ್ಷದ ಪ್ಲಾನ್ ಬಯಸುವ ಗ್ರಾಹಕರು 999 ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
ಅಮೆಜಾನ್ ಪ್ರೈಮ್ ವಿಡಿಯೋ ಈ ಯೋಜನೆಯನ್ನು ಕೆಲವು ತಿಂಗಳ ಹಿಂದೆ ನಿಲ್ಲಿಸಿತ್ತು. ಮೂರು ತಿಂಗಳು ಹಾಗೂ ಒಂದು ವರ್ಷದ ಯೋಜನೆಯನ್ನು ಮಾತ್ರ ಜಾರಿಗೊಳಿಸಿತ್ತು. ಆದ್ರೀಗ ಮತ್ತೆ ಹಳೆ ಪ್ಲಾನ್ ಶುರು ಮಾಡಿದೆ.
ಅಮೆಜಾನ್ 129 ರೂಪಾಯಿ ಯೋಜನೆಯನ್ನು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಮಾತ್ರ ಪಡೆಯಬಹುದು. ಆರ್ಬಿಐ ಇ-ಆದೇಶದ ಮಾರ್ಗಸೂಚಿಯನ್ನು ಪಾಲಿಸದ ಬಳಕೆದಾರರು ಇದನ್ನು ಖರೀದಿಸಲು ಸಾಧ್ಯವಿಲ್ಲ.