ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವ ಗ್ರಾಹಕರ ಜೇಬಿಗೆ ಶೀಘ್ರವೇ ಕತ್ತರಿ ಬೀಳಲಿದೆ. ಅಮೆಜಾನ್ ಪ್ರೈಮ್ ಸದಸ್ಯತ್ವ ಮೊದಲಿಗಿಂತ ಶೇಕಡಾ 50ರಷ್ಟು ಹೆಚ್ಚಾಗಲಿದೆ.
ಇ-ಕಾಮರ್ಸ್ ಮತ್ತು ಒಟಿಟಿ ಪ್ಲಾಟ್‌ಫಾರ್ಮ್ ಕಂಪನಿ ತನ್ನ ಪ್ರೈಮ್ ಸದಸ್ಯತ್ವದ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ತನ್ನ ಸದಸ್ಯತ್ವ ಶುಲ್ಕವನ್ನು ಹೆಚ್ಚಿಸಿದೆ. ಈಗ ಅಮೆಜಾನ್ ಸರದಿ. 2017 ರ ನಂತರ ಮೊದಲ ಬಾರಿಗೆ ಅಮೆಜಾನ್ ತನ್ನ ಸದಸ್ಯತ್ವ ವೆಚ್ಚದಲ್ಲಿ ಹೆಚ್ಚಳ ಮಾಡಲಿದೆ.
ಅಮೆಜಾನ್ ಪ್ರೈಂ ಮಾಸಿಕ ದರ 129 ರೂಪಾಯಿಯಿದ್ದು, ಅದು 179 ರೂಪಾಯಿಯಾಗಲಿದೆ. ಮೂರು ತಿಂಗಳ ದರ 329 ರೂಪಾಯಿಯಿಂದ 459 ರೂಪಾಯಿಯಾಗಲಿದೆ. ವಾರ್ಷಿಕ ದರ ಪ್ರಸ್ತುತ 999 ರೂಪಾಯಿಯಿದ್ದು, ಅದು 1,499 ರೂಪಾಯಿ ತಲುಪಲಿದೆ.
ಬೆಲೆ ಏರಿಕೆ ಯಾವಾಗ ಜಾರಿಗೆ ಬರಲಿದೆ ಎನ್ನುವ ಬಗ್ಗೆ ಅಮೆಜಾನ್ ಸ್ಪಷ್ಟನೆ ನೀಡಿಲ್ಲ. ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಜುಲೈ 2016 ರಲ್ಲಿ ಭಾರತದಲ್ಲಿ 499 ರೂಪಾಯಿಗೆ ಆರಂಭಿಸಲಾಗಿತ್ತು. ಅಕ್ಟೋಬರ್ 2017 ರಲ್ಲಿ ಅದನ್ನು 999 ರೂಪಾಯಿಗೆ ಹೆಚ್ಚಿಸಲಾಯಿತು.