ಸದ್ಯ ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ವೀಕ್ಷಣೆ ಮಾಡುವವರಿಗೆ ಬೇಸರದ ಸುದ್ದಿಯೊಂದಿದೆ. ಅಮೆಜಾನ್ ಪ್ರೈಮ್ ಸದಸ್ಯತ್ವ ಶೇಕಡಾ 50ರಷ್ಟು ಹೆಚ್ಚಾಗಲಿದೆ. ಈ ಬಗ್ಗೆ ಅಮೆಜಾನ್ ಯಾವುದೇ ಮಾಹಿತಿ ನೀಡಿಲ್ಲ. ಆದ್ರೆ ಮೂಲಗಳು ಇದನ್ನು ದೃಢಪಡಿಸಿವೆ.
ಡಿಸೆಂಬರ್ 14 ರಿಂದ ಸದಸ್ಯತ್ವದ ಹೊಸ ಬೆಲೆ ಜಾರಿಗೆ ಬರಲಿದೆ. ಹಳೆಯ ಹಾಗೂ ಹೊಸ ಚಂದಾದಾರರಿಗೆ ಈ ಬೆಲೆ ಅನ್ವಯವಾಗಲಿದೆ. 129 ರೂಪಾಯಿ, 329 ರೂಪಾಯಿ ಮತ್ತು 999 ರೂಪಾಯಿಯ ಚಂದಾದಾರಿಕೆ ಪಡೆಯಲು ಡಿಸೆಂಬರ್ 13 ಕೊನೆ ದಿನ. ಡಿಸೆಂಬರ್ 14ರ ನಂತ್ರ ಅಮೆಜಾನ್ ಪ್ರೈಮ್ ಸದಸ್ಯತ್ವದ 999 ರೂಪಾಯಿ ಪ್ಲಾನ್ 1499 ರೂಪಾಯಿ ಆಗಲಿದೆ. ಇದು 12 ತಿಂಗಳ ಮಾನ್ಯತೆ ಹೊಂದಿದೆ. 329 ರಪಾಯಿ ತ್ರೈಮಾಸಿಕ ಯೋಜನೆ ಬೆಲೆ 459 ರೂಪಾಯಿಯಾಗಲಿದೆ. 129 ರೂಪಾಯಿ ಮಾಸಿಕ ಯೋಜನೆ 179 ರೂಪಾಯಿಯಾಗಲಿದೆ.
ಹೊಸ ಸೇವೆಗಳನ್ನು ಪ್ರೈಮ್ ಗೆ ಸೇರಿಸುತ್ತಿರುವ ಕಾರಣ ಬೆಲೆ ಹೆಚ್ಚಾಗಲಿದೆ ಎಂದು ಕಂಪನಿ ಈ ಹಿಂದೆ ಹೇಳಿತ್ತು. ನೆಟ್‌ಫ್ಲಿಕ್ಸ್, ಆಪಲ್ ಮತ್ತು ಇತರ ಕಂಪನಿಗಳ ಒಂದು ವರ್ಷದ ಪ್ಲಾನ್ ಗೆ ಹೋಲಿಕೆ ಮಾಡಿದ್ರೆ ಪ್ರೈಮ್ ನ 999 ರೂಪಾಯಿ ಚಂದಾದಾರಿಕೆಯು ಅತ್ಯಂತ ಒಳ್ಳೆ ಮತ್ತು ಆಕರ್ಷಕ ಯೋಜನೆಯಾಗಿದೆ.