ಡಿಸೆಂಬರ್ 14ರಿಂದ ಅಮೆಜಾನ್ ಪ್ರೈಮ್ ಸದಸ್ಯತ್ವದ ದರವು ಹೆಚ್ಚಾಗಲಿದೆ. ಡಿಸೆಂಬರ್ 13ರ ಬಳಿಕ ಪ್ರೈಮ್ ಮೆಂಬರ್ಶಿಪ್ ಭಾರತದಲ್ಲಿ 50 ಪ್ರತಿಶತಕ್ಕಿಂತ ಅಧಿಕವಾಗಲಿದೆ. ಕಂಪನಿಯ ವಾರ್ಷಿಕ ದೀಪಾವಳಿ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಯು ಪ್ರೈಮ್ ಸದಸ್ಯತ್ವ ಶುಲ್ಕ ಹೆಚ್ಚಳದ ಬಗ್ಗೆ ಘೋಷಣೆ ಮಾಡಿದೆ.
ಆದರೆ ಆಗ ಹೊಸ ದರವು ಯಾವಾಗ ಜಾರಿಗೆ ಬರಲಿದೆ ಎಂಬುದನ್ನು ಕಂಪನಿ ಹೇಳಿರಲಿಲ್ಲ. ನವೆಂಬರ್ ತಿಂಗಳ ಕೊನೆಯಲ್ಲಿ ಅಮೆಜಾನ್ ದಿನಾಂಕ ಘೋಷಣೆ ಮಾಡಿದೆ.
ಡಿಸೆಂಬರ್ 13ರವರೆಗೂ ಅಮೆಜಾನ್ ಪ್ರೈಮ್ ಸದಸ್ಯತ್ವ ಈಗಿರುವ ದರದಲ್ಲೇ ಇರಲಿದೆ. ಡಿಸೆಂಬರ್ 14ರಿಂದ ಹೊಸ ದರವು ಜಾರಿಗೆ ಬರಲಿದೆ. ಹೀಗಾಗಿ ಡಿಸೆಂಬರ್ 13ರ ಮಧ್ಯರಾತ್ರಿಯವರೆಗೂ ಗ್ರಾಹಕರು ಹಳೆಯ ದರ ಅಂದರೆ ವಾರ್ಷಿಕ 999 ರೂಪಾಯಿ ಮೌಲ್ಯದಲ್ಲಿಯೇ ತಮ್ಮ ಅಮೆಜಾನ್ ಪ್ರೈಮ್ ಸದಸ್ಯತ್ವ ಮುಂದುವರಿಸಬಹುದಾಗಿದೆ.
ಡಿಸೆಂಬರ್ 13ರ ಬಳಿಕ ಅಮೆಜಾನ್ ಪ್ರೈಮ್ ಸದಸ್ಯತ್ವ ದರ ಎಷ್ಟಾಗಲಿದೆ..?
ಡಿಸೆಂಬರ್ 13ರ ಬಳಿಕ ಗ್ರಾಹಕರು ಅಮೆಜಾನ್ ಸದಸ್ಯತ್ವ ಪಡೆಯಬೇಕು ಅಂದರೆ 1499 ರೂಪಾಯಿ ಪಾವತಿ ಮಾಡಬೇಕು. ಅಂದರೆ ಗ್ರಾಹಕರ ಜೇಬಿಗೆ ಹೆಚ್ಚುವರಿ 500 ರೂಪಾಯಿಗಳ ಹೊರೆ ಬೀಳಲಿದೆ.
ಈಗಾಗಲೇ ಅಮೆಜಾನ್ ಪ್ರೈಮ್ ಸದಸ್ಯತ್ವ ಹೊಂದಿರುವವರು ತಮ್ಮ ಪ್ಲಾನ್ನ್ನು ಡಿಸೆಂಬರ್ 13ರವರೆಗೆ ನವೀಕರಿಸಬಹುದಾಗಿದೆ. ಆಫರ್ ಮುಗಿಯುವ ಒಳಗಾಗಿ ನೀವು ಹಳೆಯ ಬೆಲೆಗೆ ಅಮೆಜಾನ್ ಪ್ರೈಮ್ ಸದಸ್ಯತ್ವ ಮುಂದುವರಿಸಿಕೊಳ್ಳಿ ಎಂದು ಅಮೆಜಾನ್ ಹೇಳಿದೆ.