ಇ-ಕಾಮರ್ಸ್ ಕಂಪನಿ ಅಮೆಜಾನ್, ಗ್ರಾಹಕರಿಗೆ ಸ್ವಾಂತತ್ರ್ಯ ದಿನದ ಹಿನ್ನಲೆಯಲ್ಲಿ ಭರ್ಜರಿ ಆಫರ್ ನೀಡ್ತಿದೆ. ಅಮೆಜಾನ್ ಸೇಲ್ ನಲ್ಲಿ ಗ್ರಾಹಕರಿಗೆ ಅನೇಕ ವಸ್ತುಗಳ ಮೇಲೆ ರಿಯಾಯಿತಿ ಸಿಗ್ತಿದೆ. ಇದ್ರ ಮಧ್ಯೆ ಅಮೆಜಾನ್ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಆನ್ಲೈನ್ ನಲ್ಲಿಯೇ ಕೆಲಸ ಮುಂದುವರಿಸಲು ಅಮೆಜಾನ್ ನಿರ್ಧರಿಸಿದೆ.
ಉದ್ಯೋಗಿಗಳ ಸುರಕ್ಷತೆ ಬಗ್ಗೆ ಅಮೆಜಾನ್ ಸಂಪೂರ್ಣ ಕಾಳಜಿ ವಹಿಸುತ್ತಿದೆ. ಟೆಕ್ ಮತ್ತು ಕಾರ್ಪೊರೇಟ್ ಉದ್ಯೋಗಿಗಳು ಕಚೇರಿಗೆ ಹಿಂದಿರುಗುವ ದಿನಾಂಕವನ್ನು ಜನವರಿ 2022ರವರೆಗೆ ವಿಸ್ತರಿಸಿದೆ. ಕೊರೊನಾ ವೈರಸ್ ಮತ್ತು ಡೆಲ್ಟಾ ಸೋಂಕಿನ ಹೆಚ್ಚುತ್ತಿರುವ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ವರದಿಯ ಪ್ರಕಾರ, ಮೈಕ್ರೋಸಾಫ್ಟ್ ಮತ್ತು ಇತರ ಟೆಕ್ ಕಂಪನಿಗಳು, ಕಚೇರಿಗೆ ಬರುವ ಸಿಬ್ಬಂದಿಗೆ ಕೊರೊನಾ ಲಸಿಕೆ ಅನಿವಾರ್ಯ ಮಾಡಿವೆ. ಆದ್ರೆ ಅಮೆಜಾನ್ ಉದ್ಯೋಗಿಗಳಿಗೆ ಇದು ಅನಿವಾರ್ಯವಲ್ಲ. ಲಸಿಕೆ ಪಡೆಯದಿರುವವರು ಮಾಸ್ಕ್ ಧರಿಸಬೇಕು. ಎಲ್ಲ ಉದ್ಯೋಗಿಗಳ ಸುರಕ್ಷತೆ ಮುಖ್ಯವೆಂದು ಅಮೆಜಾನ್ ಹೇಳಿದೆ.
ಸೆಪ್ಟೆಂಬರ್ 7 ರಿಂದ ಕಚೇರಿಗೆ ಬರುವಂತೆ ಅಮೆಜಾನ್ ಮೊದಲು ಸೂಚನೆ ನೀಡಿತ್ತು. ಆದ್ರೀಗ ಯೋಜನೆಯನ್ನು ಮುಂದೂಡಿದೆ. ಯುಎಸ್ ನಲ್ಲಿ ಕಚೇರಿಗಳು ಜನವರಿ 3 ರಿಂದ ತೆರೆಯುವ ಸಾಧ್ಯತೆಯಿದೆ.