ದೇಶದ ಹಲವು ಕಂಪನಿಗಳು ಬೈ ನೌ ಪೇ ಲೇಟರ್ ಸೌಲಭ್ಯವನ್ನು ಒದಗಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಜನಪ್ರಿಯವಾಗುತ್ತಿದೆ. ದೈತ್ಯ ಇ-ಕಾಮರ್ಸ್ ಕಂಪನಿ ಅಮೆಜಾನ್ ಕೂಡ ಬೈ ನೌ ಪೇ ಲೇಟರ್ ಸೌಲಭ್ಯವನ್ನು ಒದಗಿಸುತ್ತಿದೆ. ಕಂಪನಿಯು ಈ ಸೇವೆಗೆ ಅಮೆಜಾನ್ ಪೇ ಲೇಟರ್ ಎಂದು ಹೆಸರಿಟ್ಟಿದೆ.
ಅಮೆಜಾನ್, ಬಳಕೆದಾರರಿಗೆ 60 ಸಾವಿರ ರೂಪಾಯಿಗಳವರೆಗೆ ಕ್ರೆಡಿಟ್ ಮಿತಿ ನೀಡಿದೆ. ಬಳಕೆದಾರರು ಕ್ರೆಡಿಟ್ ಮಿತಿಯೊಳಗೆ ಖರ್ಚು ಮಾಡಬಹುದು. ಹಣವನ್ನು ಆಗ್ಲೇ ಪಾವತಿ ಮಾಡಬೇಕಾಗಿಲ್ಲ. ನಂತ್ರ ಪಾವತಿ ಮಾಡಬಹುದು. ಅಮೆಜಾನ್ ಕ್ಯಾಪಿಟಲ್ ಫ್ಲೋಟ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ʼಆಧಾರ್ʼ ಕಾರ್ಡ್ ನಲ್ಲಿ ಎಷ್ಟು ಬಾರಿ ವಿವರ ಬದಲಿಸಬಹುದು…? ಇಲ್ಲಿದೆ ಎಲ್ಲರೂ ತಿಳಿದುಕೊಳ್ಳಬೇಕಾದ ಮಾಹಿತಿ
ಶಾಪಿಂಗ್ ಜೊತೆಗೆ ಅಮೆಜಾನ್ ಪೇ ಲೇಟರನ್ನು ದಿನಸಿ, ಮೊಬೈಲ್ ರೀಚಾರ್ಜ್ ಮತ್ತು ಯುಟಿಲಿಟಿ ಬಿಲ್‌ಗಳಿಗೆ ಸಹ ಮಾನ್ಯವಾಗಿರುತ್ತದೆ. ಯಾವುದೇ ಬಡ್ಡಿಯಿಲ್ಲದೆ, ಹಣವನ್ನು ವಾಪಸ್ ಮಾಡಬೇಕು. ಇಎಂಐ ಆಯ್ಕೆಯೂ ಗ್ರಾಹಕರಿಗೆ ಲಭ್ಯವಾಗಲಿದೆ.
ಇಎಂಐ ಆಯ್ಕೆ ತೆಗೆದುಕೊಂಡರೆ, ಗ್ರಾಹಕರು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅಮೆಜಾನ್ ಈ ಸೌಲಭ್ಯದ ಲಾಭ ಪಡೆಯಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ಮೊಬೈಲ್ ಸಂಖ್ಯೆ ಅಮೆಜಾನ್ ಜೊತೆ ಲಿಂಕ್ ಆಗಿರಬೇಕು. ಮಾನ್ಯವಾದ ಪಾನ್ ಕಾರ್ಡ್ ಹೊಂದಿರುವುದು ಕಡ್ಡಾಯ.
ಅಮೆಜಾನ್ ಅಪ್ಲಿಕೇಶನ್‌ನಲ್ಲಿ, ಅಮೆಜಾನ್ ಪೇಗೆ ಹೋಗಬೇಕು.ಇಲ್ಲಿ ಅಮೆಜಾನ್ ಪೇ ಲೇಟರ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಪಾನ್ ನ ಕೊನೆಯ 4 ಅಂಕಿಗಳನ್ನು ನೀಡಬೇಕು. ಅಲ್ಲಿ ಕ್ರೆಡಿಟ್ ಮಿತಿಯಿರುತ್ತದೆ. ಅದರಂತೆ ನೀವು ಹಣ ಖರ್ಚು ಮಾಡಬಹುದು.