ಮಾತನ್ನು ಕಮಾಂಡ್ ರೂಪದಲ್ಲಿ ಗ್ರಹಿಸಿ ಕಾರ್ಯನಿರ್ವಹಿಸುವ ಅಲೆಕ್ಸಾ ಇನ್ನೊಂದು ಮಹತ್ವದ ಫೀಚರ್ ಅನ್ನು ಶೀಘ್ರವೇ ಹೊಂದಲಿದೆ.
ಯಾವುದೇ ಧ್ವನಿಯನ್ನು ಅನುಕರಿಸಲು ಅನುಮತಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಲಾಗುತ್ತಿದೆ ಎಂದು ಅಮೆಜಾನ್ ಹಿರಿಯ ವೈಸ್ ಪ್ರೆಸಿಡೆಂಟ್ ರೋಹಿತ್ ಪ್ರಸಾದ್ ಹೇಳಿದ್ದಾರೆ.
ಕಂಪನಿಯು ಲಾಸ್ ವೇಗಾಸ್‌ನಲ್ಲಿ ಬುಧವಾರ ನಡೆದ ಸಮ್ಮೇಳನದಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದೆ. ನಮ್ಮಲ್ಲಿ ಅನೇಕರು ನಾವು ಪ್ರೀತಿಸುವವರನ್ನು ಕಳೆದುಕೊಂಡಿರುತ್ತೇವೆ ನಂತರ ನೆನಪುಗಳನ್ನು ಉಳಿಯುವಂತೆ ಮಾಡುವುದು ಇದರ ಉದ್ದೇಶವಾಗಿದೆ.
ಇಂತಹ ವೈಶಿಷ್ಟ್ಯವನ್ನು ಯಾವಾಗ ಪರಿಚಯಿಸಲಾಗುತ್ತದೆ ಎಂಬ ಸಂಗತಿಯನ್ನು ಹಂಚಿಕೊಳ್ಳಲು ಕಂಪನಿ ನಿರಾಕರಿಸಿದೆ. ಅಮೆಜಾನ್ ಸಮ್ಮೇಳನದಲ್ಲಿ ಈ ಬೆಳವಣಿಗೆ ಕುರಿತು ತನ್ನ ಚಿಂತನೆಯನ್ನು ಹಂಚಿಕೊಂಡಿದೆ.
ವೀಡಿಯೊದಲ್ಲಿರುವಂತೆ, “ಅಲೆಕ್ಸಾ, ಅಜ್ಜಿ ನನಗಾಗಿ ವಿಝಾರ್ಡ್ ಆಫ್ ಓಝ್ ಅನ್ನು ಓದುತ್ತಿರಾ?” ಎಂದು ಕೇಳಿದಾಗ ಸ್ವಲ್ಪ ಸಮಯದ ನಂತರ, ಅಲೆಕ್ಸಾ ಆಜ್ಞೆಯನ್ನು ದೃಢೀಕರಿಸಿ ತನ್ನ ಧ್ವನಿಯನ್ನು ಬದಲಾಯಿಸಿ ಹಿತವಾಗಿ ಮಾತನಾಡಿದ್ದಾರೆ. ಇದು ಮೇಲ್ನೋಟಕ್ಕೆ ವ್ಯಕ್ತಿಯಂತೆ ಧ್ವನಿಸುತ್ತಿತ್ತು.