alex Certify ಕೊರೊನಾ ಕುರಿತು ಈವರೆಗೆ ಅರಿವೇ ಇರಲಿಲ್ಲ ಇವರಿಗೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕುರಿತು ಈವರೆಗೆ ಅರಿವೇ ಇರಲಿಲ್ಲ ಇವರಿಗೆ…!

ಕೊರೊನಾ ವಿಶ್ವದಾದ್ಯಂತ ಸಾಕಷ್ಟು ಅನಾಹುತಗಳನ್ನು ಮಾಡಿದೆ. 2019 ರಿಂದಲೇ ಕೊರೊನಾ ಜಗತ್ತಿನಲ್ಲಿ ಭೀತಿ ಸೃಷ್ಟಿಸಿದೆ. ವಿಶ್ವದ ಅನೇಕ ದೇಶಗಳಲ್ಲಿ ಲಕ್ಷಾಂತರ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ವಿಶ್ವದ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಹಾಕುವ ಅನಿವಾರ್ಯತೆ ಎದುರಾಗಿದೆ. ಇದೇ ಕಾರಣಕ್ಕೆ ಪೆರುವಿಯನ್ ವೈದ್ಯಕೀಯ ತಂಡವು ಅಮೆಜಾನ್ ಕಾಡುಗಳಲ್ಲಿ ವಾಸಿಸುವ ಮೂಲನಿವಾಸಿ ಬುಡಕಟ್ಟು ಜನಾಂಗದವರಿಗೆ ಲಸಿಕೆ ನೀಡಲು ನಿರ್ಧರಿಸಿದೆ.

ಮೂರು ದಿನಗಳ ಕಾಲ ದೋಣಿಯಲ್ಲಿ ಪ್ರಯಾಣಿಸಿದ ತಂಡವು ಬುಡಕಟ್ಟು ಗ್ರಾಮವನ್ನು ತಲುಪಿತು. ತಂಡದ ಜೊತೆ ಆದಿವಾಸಿಗಳು ಮಾತನಾಡಿದ್ದಾರೆ. ಅಧಿಕಾರಿಗಳ ಜೊತೆ ಮಾತನಾಡಿದಾಗ್ಲೇ ಅವರಿಗೆ ಕೊರೊನಾ ಸಂಗತಿ ಗೊತ್ತಾಗಿದೆ. 2 ವರ್ಷಗಳ ನಂತ್ರ ಕೊರೊನಾ ಹೆಸರನ್ನು ಆದಿವಾಸಿಗಳು ಕೇಳಿದ್ದಾರೆ.

ನಟ ಅನುಪಮ್ ಖೇರ್ ಅವರನ್ನು ಒಣಗಿದ ಮೀನಿಗೆ ಹೋಲಿಸಿದ್ದು ಯಾರು ಗೊತ್ತಾ..? ವಿಡಿಯೋ ವೈರಲ್

ಅಮೆಜಾನ್ ಕಾಡುಗಳಲ್ಲಿ ವಾಸಿಸುವ ಈ ಸಮುದಾಯದ ಬಗ್ಗೆ ಜಗತ್ತಿಗೆ ತಿಳಿದಿಲ್ಲ. ಶತಮಾನಗಳಿಂದ ಕಾಡಿನ ಮಧ್ಯದಲ್ಲಿ ವಾಸಿಸುತ್ತಿದ್ದಾರೆ.  ಕಳೆದ ಎರಡು ವರ್ಷಗಳಿಂದ ಜಗತ್ತನ್ನು ಧ್ವಂಸಗೊಳಿಸಿದ ಕೊರೊನಾ ಬಗ್ಗೆ ಈ ಸಮುದಾಯಕ್ಕೆ ತಿಳಿದಿಲ್ಲ. ಅಚ್ಚರಿ ಅಂದ್ರೆ ವಿಷ್ಯ ಕೇಳಿದ ನಂತ್ರ ಆದಿವಾಸಿಗಳು ಲಸಿಕೆ ಹಾಕಿಸಿಕೊಳ್ಳಲು ಒಪ್ಪಿದ್ದಾರೆ.

ಪೆರುವಿನಲ್ಲಿ ಕೊರೊನಾ ಸೋಂಕು ಹೆಚ್ಚಿತ್ತು. ಕೊರೊನಾ ಈ ಜನಾಂಗದವರಿಗೆ ಯಾವುದೇ ಸಮಸ್ಯೆಯುಂಟು ಮಾಡಿಲ್ಲ. ಈ ಸಮುದಾಯವು ಹಲವು ಶತಮಾನಗಳಿಂದ ಕಾಡಿನಲ್ಲಿ ವಾಸವಾಗಿದೆ.

ಮಾಸ್ಕ್ ಮತ್ತು ಪಿಪಿಇ ಕಿಟ್‌ಗಳಲ್ಲಿ ಜನರನ್ನು ನೋಡಿದಾಗ ಆದಿವಾಸಿಗಳಿಗೆ ಅರ್ಥವಾಗಲಿಲ್ಲ. ನಂತರ ತಂಡವು ಜಗತ್ತು, ಪ್ರಸ್ತುತ ಕೊರೊನಾ  ರೋಗದ ವಿರುದ್ಧ ಹೋರಾಡುತ್ತಿದೆ ಎಂದು ಹೇಳಿದರು. ಕೊರೊನಾದಿಂದ ರಕ್ಷಣೆ ಪಡೆಯಲು ಇದನ್ನು ಧರಿಸಿರುವುದಾಗಿ ಹೇಳಿದ್ರು. ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ವಾಸಿಸುವ ಇವರು, ಮೀನು ಸೇವನೆ ಮಾಡ್ತಾರೆ. ಅವರ ಭಾಷೆ ಕೂಡ ಸಂಪೂರ್ಣವಾಗಿ ಭಿನ್ನವಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...