ಕಾರ್ಮಿಕರ ಸಂಘ ರಚನೆಗೆ ಮುಂದಾದ ತನ್ನ ಇಬ್ಬರು ನೌಕರರನ್ನು ಅಮೆಜಾನ್ ಕೆಲಸದಿಂದಲೇ ವಜಾ ಮಾಡಿದೆ.
ನ್ಯೂಯಾರ್ಕ್ ನಗರದಲ್ಲಿನ ಕಂಪನಿಯ ಅತಿದೊಡ್ಡ ಗೋದಾಮಿನಲ್ಲಿ ನೌಕರರನ್ನು ಸಂಘಟಿಸಲು ಪ್ರಯತ್ನ ಮಾಡಿದ ಇಬ್ಬರು ಸ್ಟೇಟನ್ ಐಲ್ಯಾಂಡ್ ವೇರ್‌ಹೌಸ್ ಕಾರ್ಮಿಕರನ್ನು ಅಮೆಜಾನ್ ವಜಾಗೊಳಿಸಿದೆ.
ಏಪ್ರಿಲ್‌ನಲ್ಲಿ ನ್ಯೂಯಾರ್ಕ್ ಜೆಎಫ್‌ಕೆ8 ಗೋದಾಮಿನಲ್ಲಿ ಅಮೆರಿಕಾ ಕಾರ್ಮಿಕ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಕಂಪನಿ ವಿರುದ್ಧ ತೀವ್ರವಾಗಿ ಕಾರ್ಮಿಕರು ಯಶಸ್ವಿಯಾಗಿ ಸಂಘಟಿತರಾಗಿದ್ದಾರೆ.
ಮೇ.16ರಿಂದ ಶಾಲೆಗಳು ಪುನರಾರಂಭ; ಇನ್ನೂ ಪೂರೈಕೆಯಾಗದ ಪಠ್ಯಪುಸ್ತಕ
ಟೆಕ್ ದೈತ್ಯ ಅಮೆಜಾನ್ ಇಲ್ಲಿಯವರೆಗೆ ನೌಕರರ ಸಂಘವನ್ನು ಗುರುತಿಸಲು ನಿರಾಕರಿಸಿದೆ. ಅಮೆಜಾನ್ ಲೇಬರ್ ಯೂನಿಯನ್‌ಗೆ ಏಪ್ರಿಲ್ 1 ರಂದು ಚುನಾವಣೆ ನಡೆದಿತ್ತು, ನಂತರ ಅಮೆಜಾನ್ ಸ್ಟೇಟನ್ ಐಲೆಂಡ್‌ನಲ್ಲಿ ಸಂಘಟಕರನ್ನು ಟರ್ಮಿನೇಟ್ ಮಾಡಿತ್ತು. ಈ ಬಗ್ಗೆ ಸ್ಪಷ್ಟತೆ ಇಲ್ಲದ ಹೇಳಿಕೆ ಅಮೆಜಾನ್ ಕಡೆಯಿಂದ ಬಂದಿತ್ತು.
ಅಮೇಜಾನ್ ವೇರ್ ಹೌಸ್ ಉದ್ಯೋಗಿಯೊಬ್ಬರ ಫೋಟೋ ಮಾಧ್ಯಮಗಳಲ್ಲಿ ಕಾಣುಸಿತ್ತು. ಅವರ ಉತ್ಪಾದಕತೆ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ಕೆಲಸದಿಂದ ವಜಾಗೊಳಿಸಲಾಗಿದೆ.
ಅಮೆಜಾನ್ ಕಾರ್ಮಿಕ ಒಕ್ಕೂಟ ಸಂಬಂಧ ಅಭಿಯಾನ ನಡೆಸಿದ ಆರು ಹಿರಿಯ ಮೇನೇಜರ್‌ಗಳನ್ನೂ ಸಹ ಮೇ 5ರಂದು ಕೆಲಸದಿಂದ ವಜಾಗೊಳಿಸಲಾಗಿದೆ.