ಆನ್ಲೈನ್ ಶಾಪಿಂಗ್‌ನಲ್ಲಿ ಖರೀದಿ ಮಾಡಿದ ವಸ್ತುಗಳ ಡೆಲಿವರಿ ವೇಳೆ ಬಹಳ ಗೊಂದಲಗಳಾಗುವುದನ್ನು ನೀವು ಬಹಳಷ್ಟು ಬಾರಿ ನೋಡಿರುತ್ತೀರಿ.
ಇತ್ತೀಚೆಗೆ ಅಮೆಜ಼ಾನ್‌ನಲ್ಲಿ ವಿಟಮಿನ್ ಪೂರೈಕೆಗಳ ಪುಟ್ಟ ಬಾಟಲಿಯನ್ನು ಆರ್ಡರ್ ಮಾಡಿದ ಇಂಗ್ಲೆಂಡ್‌ನ 55 ವರ್ಷದ ಮಾರ್ಕ್ ರೀಡ್, ತಮ್ಮ ಆರ್ಡರ್ ಅನ್ನು ದೊಡ್ಡದೊಂದು ಟಿವಿ ಡಬ್ಬದಲ್ಲಿ ಪಡೆದಾಗ ಅಚ್ಚರಿಗೀಡಾಗಿದ್ದಾರೆ.
7.95 ಪೌಂಡ್ ಮೌಲ್ಯದ, ವಿಟಮಿನ್ ಡಿ3ಯ 120 ಮಾತ್ರೆಗಳಿರುವ ಬಾಟಲಿ ಹಾಗೂ 7.49 ಪೌಂಡ್ ಮೌಲ್ಯದ, 12 ಸ್ಕಿವರ್‌ಗಳನ್ನು ಅಮೆಜ಼ಾನ್ ಮೂಲಕ ಆರ್ಡರ್ ಮಾಡಿದ್ದರು ರೀಡ್. ಅವರ ಈ ಆರ್ಡರ್‌ಗಳನ್ನು ದೊಡ್ಡ ಡಬ್ಬದಲ್ಲಿ ನಾರ್ಥಂಬರ್ಲ್ಯಾಂಡ್‌ನ ಆಲ್ನ್‌ವಿಕ್‌ನಲ್ಲಿರುವ ಅವರ ಮನೆಗೆ ತಲುಪಿಸಲಾಗಿದೆ.
ಪ್ರಧಾನಿ ಮೋದಿ ಭೇಟಿ ಕುರಿತು ದೀದಿ ಹೇಳಿದ್ದೇನು….?
ಎರಡು ಪುಟ್ಟ ಆರ್ಡರ್‌ಗಳಿಗೆ ಇಷ್ಟೊಂದು ದೊಡ್ಡ ಪ್ಯಾಕೇಜ್ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿರುವ ರೀಡ್, ಇದರಿಂದ ಎಷ್ಟೆಲ್ಲಾ ವೇಸ್ಟೇಜ್ ಆಗಿದೆ ಎಂದು ಬೇಸರಗೊಂಡಿದ್ದಾರೆ.
ರದ್ದಿ ಕಾಗದವನ್ನು ಮರುಬಳಕೆಗೆ ಹಾಕಿದ ಇಬ್ಬರು ಮಕ್ಕಳ ಈ ತಂದೆ, ಅಮೆಜ಼ಾನ್‌ನಂಥ ದೊಡ್ಡ ಕಂಪನಿಗಳು ಇಂಥ ವಿಚಾರಗಳಲ್ಲಿ ಇತರರಿಗೆ ಮಾದರಿಯಾಗಬೇಕಿದೆ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಮೆಜ಼ಾನ್‌ನ ಪ್ರತಿನಿಧಿಯೊಬ್ಬರು, ತನ್ನ ಡೆಲಿವರಿಗಳನ್ನು 100% ಮರುಬಳಕೆ ಮಾಡಬಲ್ಲ ಪ್ಯಾಕೇಜಿಂಗ್ ಮೂಲಕ ಕಳುಹಿಸುವ ಮೂಲಕ 2015ರ ವರ್ಷವೊಂದರಲ್ಲೇ 36,000 ಟನ್‌ಗಳಷ್ಟು ಹೆಚ್ಚುವರಿ ಪ್ಯಾಕೇಜಿಂಗ್ ವಸ್ತುಗಳನ್ನು ಉಳಿಸಿದ್ದಾಗಿ ತಿಳಿಸಿದೆ.