ನವದೆಹಲಿ: ಇ- ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ 2025ರ ವೇಳೆಗೆ ಸುಮಾರು 14 ಸಾವಿರ ವ್ಯವಸ್ಥಾಪಕ ಹುದ್ದೆಗಳನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ.
ವಾರ್ಷಿಕ ವೆಚ್ಚಗಳ ಉಳಿತಾಯದ ಉದ್ದೇಶದಿಂದ ಅಮೆಜಾನ್ ಈ ಕ್ರಮ ಕೈಗೊಂಡಿದೆ. ಇದರಿಂದ ವಾರ್ಷಿಕವಾಗಿ 300 ಕೋಟಿ ಡಾಲರ್ ಉಳಿತಾಯವಾಗುತ್ತದೆ ಎಂದು ಸಿಇಓ ಆಂಡಿ ಜಾಸ್ಸಿ ಹೇಳಿದ್ದಾರೆ.
ವಿಶ್ವದ ಅತಿ ದೊಡ್ಡ ನವೋದ್ಯಮದಂತೆ ಕಾರ್ಯನಿರ್ವಹಿಸಲು ಕೆಲವು ಬದಲಾವಣೆ ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಮಿತವ್ಯಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಜಾಗತಿಕವಾಗಿ ಅಮೆಜಾನ್ ತನ್ನ ವ್ಯವಸ್ಥಾಪಕ ಸಿಬ್ಬಂದಿ ಸಂಖ್ಯೆಯನ್ನು 1,05,770 ರಿಂದ 91,936 ಕ್ಕೆ ಕಡಿತಗೊಳಿಸಿದಲ್ಲಿ ವಾರ್ಷಿಕ ವೆಚ್ಚ 200 ರಿಂದ 360 ಕೋಟಿ ಡಾಲರ್ ನಷ್ಟು ಉಳಿತಾಯವಾಗುತ್ತದೆ. ಇದರೊಂದಿಗೆ ಅಮೆಜಾನ್ 2025 ರಲ್ಲಿ ಶೇಕಡ ಐದರಷ್ಟು ಹೆಚ್ಚುವರಿ ಲಾಭದ ಗುರಿ ಹೊಂದಿದೆ ಎಂದು ಹೇಳಲಾಗಿದೆ.