
ಇ-ಕಾಮರ್ಸ್ ಪ್ಲಾಟ್ಫಾರ್ಮ್ ಅಮೆಜಾನ್ನಲ್ಲಿ ಡೈಲಿ ಆಪ್ ರಸಪ್ರಶ್ನೆಯ ಹೊಸ ಆವೃತ್ತಿ ಪ್ರಾರಂಭವಾಗಿದೆ.
ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ ಅಮೆಜಾನ್ ರಸಪ್ರಶ್ನೆ ಮೂಲಕ 15 ಸಾವಿರ ರೂಪಾಯಿ ಗೆಲ್ಲುವ ಅವಕಾಶವನ್ನು ನೀಡುತ್ತಿದೆ. ಈ ರಸಪ್ರಶ್ನೆ ಅಮೆಜಾನ್ನ ಮೊಬೈಲ್ ಅಪ್ಲಿಕೇಶನ್ನಲ್ಲಿ ಲಭ್ಯವಿದೆ.
ಈ ದೈನಂದಿನ ರಸಪ್ರಶ್ನೆ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತದೆ. ರಾತ್ರಿ 12 ರವರೆಗೆ ಇರುತ್ತದೆ. ರಸಪ್ರಶ್ನೆ ಸಾಮಾನ್ಯ ಜ್ಞಾನ ಮತ್ತು ಕರೆಂಟ್ ಅಫೇರ್ಸ್ನ ಐದು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ರಸಪ್ರಶ್ನೆಯಲ್ಲಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯಲ್ಲಿ ನಾಲ್ಕು ಆಯ್ಕೆಗಳನ್ನು ನೀಡಲಾಗುತ್ತದೆ. ಇಂದಿನ ರಸಪ್ರಶ್ನೆ ವಿಜೇತರ ಹೆಸರನ್ನು ಮರುದಿನ ಪ್ರಕಟಿಸಲಾಗುವುದು. ಲಕ್ಕಿ ಡ್ರಾ ಮೂಲಕ ಅವರನ್ನು ಆಯ್ಕೆ ಮಾಡಲಾಗುತ್ತದೆ.
ಅಮೆಜಾನ್ ಅನೇಕ ದಿನಗಳಿಂದ ಈ ರಸಪ್ರಶ್ನೆಗಳನ್ನು ನಡೆಸುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಗ್ರಾಹಕರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ. ಸುಲಭವಾಗಿರುವ ಪ್ರಶ್ನೆಗಳಿಗೆ ಉತ್ತರ ನೀಡಿ ಅಮೆಜಾನ್ ಪೇ ಬ್ಯಾಲೆನ್ಸ್ ಪಡೆಯಲು ಸುವರ್ಣಾವಕಾಶವಿದೆ.