ಕೃತಕ ಬುದ್ಧಿಮತ್ತೆ ಹೊಂದಿರುವ ಅಮೆಜಾನ್ ಅಲೆಕ್ಸಾ ಬಳಸುವವರಿಗೆ ಒಳ್ಳೆಯ ಸುದ್ದಿ ಇದೆ. ಅಮೆಜಾನ್ ಇಂಡಿಯಾ ತನ್ನ ವರ್ಚುವಲ್ ಅಸಿಸ್ಟೆಂಟ್ ಅಲೆಕ್ಸಾವನ್ನು ನವೀಕರಿಸಿದೆ. ಅಲೆಕ್ಸಾ ಬಳಕೆದಾರರಿಗೆ ಕೊರೊನಾಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಹುಡುಕಲು ಸಹಾಯ ಮಾಡಲಿದೆ. ಅಮೆಜಾನ್ ಅಲೆಕ್ಸಾ, ಈಗ ಲಸಿಕೆ ಲಭ್ಯತೆ, ಕೋವಿಡ್ -19 ಸಹಾಯವಾಣಿ ಸಂಖ್ಯೆ, ಕೊರೊನಾ ಪರೀಕ್ಷೆ ಮತ್ತು ಲಸಿಕೆ ಕೇಂದ್ರದ ಎಲ್ಲಾ ಮಾಹಿತಿಯನ್ನು ನೀಡಲಿದೆ.
ಬಳಕೆದಾರರಿಗೆ ಕೋವಿನ್ ಪೋರ್ಟಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್‌ಸೈಟ್ ಮತ್ತು MapMyIndiaದಿಂದ ಮಾಹಿತಿ ಸಿಗಲಿದೆ. ಕಳೆದ ವರ್ಷ ಭಾರತದಲ್ಲಿ ಕೋವಿಡ್ -19 ಸಂಬಂಧಿತ ಲಕ್ಷಣಗಳು ಮತ್ತು ಪ್ರಕರಣಗಳ ಮಾಹಿತಿಯನ್ನು ಹಂಚಿಕೊಳ್ಳಲು ಅಲೆಕ್ಸಾವನ್ನು ಅಪ್‌ಡೇಟ್ ಮಾಡಲಾಗಿತ್ತು.
ಮಾಹಿತಿಯ ಪ್ರಕಾರ, ಅಮೆಜಾನ್ ಅಲೆಕ್ಸಾ, MapMyIndia ಸಹಾಯದಿಂದ, ಬಳಕೆದಾರರಿಗೆ ಹತ್ತಿರದ ಕೊರೊನಾ ಪರೀಕ್ಷಾ ಕೇಂದ್ರವನ್ನು ಹುಡುಕಲು ಸಹಾಯ ಮಾಡಲಿದೆ. ಅಲೆಕ್ಸಾ, ಕೊರೊನಾ ಪರೀಕ್ಷೆ ಎಲ್ಲಿ ನಡೆಯಲಿದೆ? ಎಂಬ ಪ್ರಶ್ನೆಗಳನ್ನು ಕೇಳುವ ಮೂಲಕ ನೀವು ಉತ್ತರ ಪಡೆಯಬಹುದು. ಅಲೆಕ್ಸಾ, ನಾನು ಎಲ್ಲಿ ಕೋವಿಡ್ ಲಸಿಕೆ ಪಡೆಯಬಹುದು?ಎಂಬ ಪ್ರಶ್ನೆ ಕೇಳಿ ಉತ್ತರ ಪಡೆಯಬಹುದು.