ಹಬ್ಬದ ಋತುವಿನಲ್ಲಿ ಇ-ಕಾಮರ್ಸ್ ಕಂಪನಿ ಅಮೆಜಾನ್, ಮಾರಾಟಗಾರರಿಗೆ ಖುಷಿ ಸುದ್ದಿ ನೀಡಿದೆ. ಅಮೆಜಾನ್ ಡಾಟ್ ಇನ್ ನ ಮಾರಾಟಗಾರರು, ಆನ್‌ಲೈನ್ ವ್ಯವಹಾರವನ್ನು ಮಲಯಾಳಂ, ತೆಲುಗು ಮತ್ತು ಬಂಗಾಳಿ ಭಾಷೆಯಲ್ಲೂ ನಡೆಸಬಹುದಾಗಿದೆ.
ಮುಂಬರುವ ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು, ಕಂಪನಿ ಈ ನಿರ್ಧಾರಕ್ಕೆ ಬಂದಿದೆ. ಕಂಪನಿ, ಹಂತ ಹಂತವಾಗಿ ತನ್ನ ವ್ಯವಹಾರವನ್ನು ವಿಸ್ತರಿಸುತ್ತಿದೆ. ಅಸ್ತಿತ್ವದಲ್ಲಿರುವ ಮಾರಾಟಗಾರರು, ಅನೇಕ ಸಂಭಾವ್ಯರು ಮತ್ತು ಹೊಸ ಮಾರಾಟಗಾರರಿಗೆ, ಇದ್ರಿಂದ ವ್ಯಾಪಾರ ಸುಲಭವಾಗಲಿದೆ. ತಮಗಿಷ್ಟವಾದ ಭಾಷೆಯಲ್ಲಿ ವ್ಯವಹಾರ ನಡೆಸಬಹುದಾಗಿದೆ.
ಅಮೆಜಾನ್ ಮಾರಾಟಗಾರರಿಗೆ ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮರಾಠಿ, ಮಲಯಾಳಂ, ತೆಲುಗು, ತಮಿಳು ಮತ್ತು ಇಂಗ್ಲಿಷ್ ಸೇರಿದಂತೆ ಎಂಟು ಭಾಷೆಗಳಲ್ಲಿ ಆನ್‌ಲೈನ್ ವ್ಯವಹಾರವನ್ನು ನಿರ್ವಹಿಸುವ ಆಯ್ಕೆಯನ್ನು ನೀಡುತ್ತದೆ. ಅಮೆಜಾನ್ ಡಾಟ್ ಇನ್ ನಲ್ಲಿ ಪ್ರಸ್ತುತ ಸುಮಾರು 8.5 ಲಕ್ಷ ಮಾರಾಟಗಾರರಿದ್ದಾರೆ.
ಅಮೆಜಾನ್, ಇ-ಕಾಮರ್ಸ್ ಕಂಪನಿಗಳಲ್ಲಿ ದೈತ್ಯ ಕಂಪನಿಯಾಗಿದ್ದು, ಹಬ್ಬದ ಋತುವಿನಲ್ಲಿ ಸಾಕಷ್ಟು ಆಫರ್ ಗಳನ್ನು ನೀಡುತ್ತದೆ. ಮುಂಬರುವ ಹಬ್ಬದ ಋತುವಿಗೆ ಕಂಪನಿ ಈಗ್ಲೇ ತಯಾರಿ ಶುರು ಮಾಡಿದೆ.