ಬಾಂಗ್ಲಾದೇಶವು ದಕ್ಷಿಣ ಏಷ್ಯಾದ ಬಹಳ ಸುಂದರವಾದ ದೇಶ. ಬಾಂಗ್ಲಾದ ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಭಾರತದ ನೆರೆಯ ದೇಶವಾಗಿರುವುದರಿಂದ ಇಲ್ಲಿಗೆ ಒಮ್ಮೆಯಾದರೂ ವಿಸಿಟ್ ಮಾಡಬಹುದು. ಈ ದೇಶಕ್ಕೆ ಭೇಟಿ ನೀಡಲು ಬಯಸುವವರು ಅಲ್ಲಿನ ಆಕರ್ಷಣೀಯ ಸ್ಥಳಗಳ ಬಗ್ಗೆ ತಿಳಿದುಕೊಂಡಿರಬೇಕು.
ಢಾಕಾ
ಢಾಕಾ ನಗರವು ಬಾಂಗ್ಲಾದೇಶದ ರಾಜಧಾನಿ. ಇದನ್ನು ಈ ದೇಶದ ಹೃದಯ ಭಾಗವೆಂದೂ ಕರೆಯುತ್ತಾರೆ. ಇಲ್ಲಿ ಬೈತುಲ್ ಮುಕರಮ್ ರಾಷ್ಟ್ರೀಯ ಮಸೀದಿ, ಢಾಕೇಶ್ವರಿ ದೇವಸ್ಥಾನ, ರಾಷ್ಟ್ರೀಯ ವಸ್ತುಸಂಗ್ರಹಾಲಯ, ಜಟಿಯಾ ಸಂಸದ್ ಭವನ, ಅಹ್ಸಾನ್ ಮಂಜಿಲ್, ಲಾಲ್ಬಾಗ್ ಕೋಟೆ ಮತ್ತು ಹತಿರ್ಜೀಲ್ಗೆ ಪ್ರವಾಸಿಗರು ಭೇಟಿ ನೀಡಬಹುದು.
ಕಾಕ್ಸ್ ಬಜಾರ್
ಬಾಂಗ್ಲಾದೇಶಕ್ಕೆ ವಿಸಿಟ್ ಮಾಡಿದವರೆಲ್ಲ ಕಾಕ್ಸ್ ಬಜಾರ್‌ಗೆ ಭೇಟಿ ನೀಡಲೇಬೇಕು. ಇಲ್ಲಿನ ಮರಳಿನ ಕಡಲತೀರಗಳು ಮನಸ್ಸಿಗೆ ಮುದ ನೀಡುತ್ತವೆ. ಇದಲ್ಲದೆ ಸೀ ಪರ್ಲ್ ವಾಟರ್ ಪಾರ್ಕ್, ಹಿಮ್ಚೋರಿ ಹಿಲ್ಸ್, ಮರೈನ್ ಡ್ರೈವ್, ಸೋನಾಡಿಯಾ ದ್ವೀಪ ಮತ್ತು ಮಹೇಶ್ಖಾಲಿ ದ್ವೀಪಕ್ಕೆ ಭೇಟಿ ನೀಡಬಹುದು.
ಸಿಲ್ಹೆಟ್
ಸಿಲ್ಹೆಟ್ , ಎತ್ತರದ ಪ್ರದೇಶಗಳು, ಜೌಗು ಕಾಡುಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಹಸಿರು ಮನಸ್ಸಿಗೆ ಶಾಂತಿಯ ಭಾವವನ್ನು ನೀಡುತ್ತದೆ. ಈ ನಗರದಲ್ಲಿ ಲೋವಚೋರಾ, ಡೋಲುರಾ, ಖಾದಿಮ್‌ನಗರ ರಾಷ್ಟ್ರೀಯ ಉದ್ಯಾನವನ ಮತ್ತು ಪಾಂಗ್ ಥು ಮೈ ಗ್ರಾಮಕ್ಕೆ ಸಹ ಪ್ರವಾಸಿಗರು ಭೇಟಿ ನೀಡಬಹುದು.
ಗಾಜಿಪುರ
ಗಾಜಿಪುರ್ ನಗರವು ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಆದ್ದರಿಂದ ಇಲ್ಲಿಗೆ ತಲುಪುವುದು ಸುಲಭ. ಇಲ್ಲಿ ನುಹಾಶ್ ಪಾಲಿ ಫಾರ್ಮ್ ಹೌಸ್, ಭವಾಲ್ ರಾಷ್ಟ್ರೀಯ ಉದ್ಯಾನವನ, ಬಂಗಬಂಧು ಸಫಾರಿ ಪಾರ್ಕ್ ಮತ್ತು ಖಾರ್ಖಾನಾ ಮಾರುಕಟ್ಟೆ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಪದ್ಮ ಸೇತುವೆ
ಬಾಂಗ್ಲಾದೇಶದ ಪದ್ಮ ಸೇತುವೆ 6.15 ಕಿಲೋಮೀಟರ್ ಉದ್ದವಿದೆ. ಈ ಸೇತುವೆಯ ಮೇಲೆ ಕಾರುಗಳು ಮತ್ತು ರೈಲು ಎರಡೂ ಚಲಿಸುತ್ತವೆ. ಇದನ್ನು 2022ರ ಜೂನ್‌ನಲ್ಲಿ ಪ್ರಾರಂಭಿಸಲಾಯಿತು. ಇದು ರಾಜಧಾನಿ ಢಾಕಾ ಸೇರಿದಂತೆ ಉತ್ತರ ಮತ್ತು ಪೂರ್ವ ಪ್ರದೇಶಗಳಿಗೆ ಸಂಪರ್ಕ ಹೊಂದಿದೆ.