
ಶ್ರೀನಗರ: ಪವಿತ್ರ ಅಮರನಾಥ ಯಾತ್ರೆ ಜೂನ್ 30 ರಿಂದ ಆರಂಭವಾಗಲಿದ್ದು, 43 ದಿನಗಳ ಕಾಲ ಇರಲಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ನೇತೃತ್ವದಲ್ಲಿ ನಡೆದ ಅಮರನಾಥ ದೇಗುಲ ಮಂಡಳಿ ಸಭೆಯಲ್ಲಿ ಜೂನ್ 30 ರಿಂದ 43 ದಿನಗಳ ಕಾಲ ಅಮರನಾಥ ಯಾತ್ರೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ರಕ್ಷಾಬಂಧನ ದಿನದಂದು ಯಾತ್ರೆ ಆರಂಭವಾಗಲಿದೆ. ಕೊರೋನಾ ಕಾರಣದಿಂದಾಗಿ ಸಾಂಕೇತಿಕವಾಗಿ ಯಾತ್ರೆ ನಡೆಸಲಾಗಿತ್ತು. ಈ ಬಾರಿ ಕೊರೋನಾ ಕಡಿಮೆಯಾಗಿರುವುದರಿಂದ 43 ದಿನ ಯಾತ್ರೆ ನಡೆಯಲಿದ್ದು, ಕೋವಿಡ್ ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.