
ಕನ್ನಡವೂ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ನಟಿ ಅಮಲಾ ಅಕ್ಕಿನೇನಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಅವರು ಖ್ಯಾತ ತೆಲುಗು ನಟ ನಾಗಾರ್ಜುನ ಅವರ ಕೈಹಿಡಿದಿದ್ದು, ಅಖಿಲ್ ಅಕ್ಕಿನೇನಿ ಹಾಗೂ ನಾಗ ಚೈತನ್ಯ ಈ ದಂಪತಿಯ ಪುತ್ರರಾಗಿದ್ದಾರೆ.
ಸಾಮಾಜಿಕ ಕಾರ್ಯಗಳಲ್ಲೂ ಸಹ ಅಮಲಾ ತಮ್ಮನ್ನು ತೊಡಗಿಸಿಕೊಂಡಿದ್ದು, ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದವರಿಗೆ ನೆರವು ನೀಡಿದ್ದಾರೆ. ಅಮಲಾ ಅಕ್ಕಿನೇನಿ ಪ್ರಾಣಿ ಪ್ರಿಯರೂ ಹೌದು. ತಮ್ಮ ತಾಯಿಯಿಂದ ಮತ್ತೊಬ್ಬರಿಗೆ ಸಹಾಯ ಮಾಡುವ ಗುಣವನ್ನು ಕಲಿತುಕೊಂಡೆ ಎಂದು ಅಮಲಾ ಹೇಳುತ್ತಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಮಲಾ ಅವರ ಅಪರೂಪದ ಹಲವು ಚಿತ್ರಗಳು ಇಲ್ಲಿವೆ. ಪ್ರವಾಸ ಪ್ರಿಯರಾಗಿರುವ ಅಮಲಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ತಮ್ಮ ಪ್ರವಾಸದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.









