ಟೋಕಿಯೋ ಒಲಿಂಪಿಕ್ಸ್ಗೆ ಮೂಡಬಿದರೆ ಆಳ್ವಾಸ್ ವಿದ್ಯಾರ್ಥಿನಿಯರು 20-07-2021 6:42AM IST / No Comments / Posted In: Karnataka, Latest News, Live News ಈ ವಾರದಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್ಗಾಗಿ ವಿಶ್ವದ ಎಲ್ಲಾ ರಾಷ್ಟ್ರಗಳು ಸನ್ನದ್ಧವಾಗುತ್ತಿದೆ. ಈ ಬಾರಿ ಹೆಚ್ಚಿನ ಆಟಗಾರರನ್ನ ಟೋಕಿಯೋಗೆ ಕಳುಹಿಸಿಕೊಡುತ್ತಿರುವ ಭಾರತ ಕೂಡ ಹೆಚ್ಚಿನ ಪದಕಗಳ ನಡುವೆ ಕಣ್ಣಿಟ್ಟಿದೆ. ಟೋಕಿಯೋ ಒಲಿಂಪಿಕ್ಸ್ಗೆ ಮೂಡಬಿದಿರೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಬ್ಬರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಧನಲಕ್ಷ್ಮೀ ಹಾಗೂ ಶುಭಾ ಈ ಬಾರಿಯ ಒಲಿಂಪಿಕ್ಸ್ನಲ್ಲಿ 4×400 ಮೀಟರ್ ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ. ತಮಿಳುನಾಡಿನ ತಿರುಚಿ ಮೂಲದವರಾದ ಧನಲಕ್ಷ್ಮೀ ಹಾಗೂ ಶುಭಾ ಆಳ್ವಾಸ್ನ ಕ್ರೀಡಾ ವಿಭಾಗದಲ್ಲಿ ದತ್ತಿ ಶಿಕ್ಷಣದ ಅಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಇಬ್ಬರು ವಿದ್ಯಾರ್ಥಿನಿಯರು ಒಲಿಂಪಿಕ್ಸ್ಗೆ ಆಯ್ಕೆಯಾದ ಹಿನ್ನೆಲೆ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ತಲಾ 1 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದ್ದಾರೆ.