ಅಲೋವೆರಾ ಔಷಧೀಯ ಗುಣಗಳಿಂದ ಕೂಡಿದೆ. ಅಲೋವೆರಾ ಆರೋಗ್ಯ ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಮಾತ್ರ ಮಾಡೋದಿಲ್ಲ. ಅಲೋವೆರಾಕ್ಕೆ ವಾಸ್ತು ಶಾಸ್ತ್ರದಲ್ಲೂ ಮಹತ್ವ ನೀಡಲಾಗಿದೆ. ವ್ಯಕ್ತಿಯ ಪ್ರಗತಿಯಲ್ಲಿ ಅಲೋವೆರಾ ಮುಖ್ಯ ಪಾತ್ರವನ್ನು ವಹಿಸುತ್ತದೆ.
- ಉದ್ಯೊಗದಲ್ಲಿ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮನೆಯ ಮುಂದೆ ಅಲೋವೆರಾ ಗಿಡವನ್ನು ಬೆಳೆಸಿ. ಮನೆಯ ಮುಂದಿರುವ ಅಲೋವೆರಾ ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ತರುವುದಲ್ಲದೆ ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದ್ರಿಂದ ಧನಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.
- ಮನೆಯ ಪಶ್ಚಿಮ ದಿಕ್ಕಿನಲ್ಲಿ ನೀವು ಅಲೋವೆರಾ ಗಿಡವನ್ನು ಬೆಳೆಸಬೇಕು. ಹೀಗೆ ಮಾಡಿದ್ರೆ ಜೀವನದಲ್ಲಿ ಸುಲಭವಾಗಿ ಪ್ರಗತಿಯನ್ನು ಸಾಧಿಸಬಹುದು.
- ದಂಪತಿ ಮಧ್ಯೆ ಭಿನ್ನಾಭಿಪ್ರಾಯವಿದ್ರೆ ಅವಶ್ಯವಾಗಿ ಮನೆಯ ಮುಂದೆ ಅಲೋವೆರಾ ಗಿಡ ಬೆಳೆಸಿ. ಇದನ್ನು ನೀವು ಪೂರ್ವ ದಿಕ್ಕಿನಲ್ಲೇ ಇಡಬೇಕು. ಹಾಗೆ ಮಾಡಿದಲ್ಲಿ ದಂಪತಿ ಮಧ್ಯೆ ಪ್ರೀತಿ ಚಿಗುರುತ್ತದೆ. ಪರಸ್ಪರ ಸಮಸ್ಯೆಗಳು ಬಗೆಹರಿಯಲು ಪ್ರಾರಂಭಿಸುತ್ತವೆ.
- ಆರ್ಥಿಕ ಸಮಸ್ಯೆಯಾಗಿದ್ದರೆ, ಕೈನಲ್ಲಿ ಹಣ ನಿಲ್ಲುತ್ತಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದರೆ ನೀವು ಮನೆಯ ಟೆರೆಸ್ ಮೇಲೆ ಅಲೋವೆರಾ ಗಿಡವನ್ನು ಬೆಳೆಸಬೇಕು. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇರೆ ಮೂಲಗಳಿಂದ ಹಣ ಗಳಿಸುವ ವಿಧಾನವನ್ನು ನಿಮಗೆ ತಿಳಿಸುತ್ತದೆ.
- ಮನೆಯ ಯಾವ ಜಾಗದಲ್ಲಿ ಅಲೋವೆರಾ ಇರಬೇಕು ಎಂಬುದನ್ನು ನೀವು ತಿಳಿದಿರಬೇಕು. ತಪ್ಪು ಜಾಗದಲ್ಲಿ ಅಲೋವೆರಾ ಗಿಡ ಬೆಳೆಸಿದ್ರೆ ಸಮಸ್ಯೆ ಕಾಡುತ್ತದೆ. ವಾಯುವ್ಯ ಭಾಗದಲ್ಲಿ ಅಪ್ಪಿತಪ್ಪಿಯೂ ಅಲೋವೆರಾ ಗಿಡ ಬೆಳೆಸಬೇಡಿ. ಇದು ಮನೆಯಲ್ಲಿ ಅಶಾಂತಿ ತರುತ್ತದೆ. ನಾನಾ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ.